ಶುಕ್ರವಾರದ ಸಭೆಯಲ್ಲಿ ಶಾಲೆ ಪುನಾರಂಭದ ಬಗ್ಗೆ ನಿರ್ಧಾರ ಮಾಡುತ್ತೇವೆ: ಬಿ.ಸಿ ನಾಗೇಶ್

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚಾಗಿದ್ದ ಪರಿಣಾಮ ಬೆಂಗಳೂರು ಸಹಿತ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ನಾಳೆ ನಡೆಯಲಿರುವ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಸಭೆಯಲ್ಲಿ ಪುನಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಲೂ ಎಲ್ಲೂ ಕೂಡಾ ಸಂಪೂರ್ಣ ಶಾಲೆ ಕ್ಲೋಸ್ ಆಗಿಲ್ಲ. ಕೊರೊನಾ ಸೋಂಕು ಹೆಚ್ಚು ಇರುವ ಕಡೆ ಡಿಸಿಗಳು ರಜೆ ಘೋಷಣೆ ಮಾಡಿದ್ದಾರೆ. 85% ಶಾಲೆಗಳು ಈಗಾಗಲೇ ರಜೆ ಇಲ್ಲದೆ ರಾಜ್ಯದಲ್ಲಿ ನಡೆದಿದೆ. ಮೂರು ಡಿಜಿಟ್ ಇದ್ದ ಸೋಂಕು ಈಗ 4 ಡಿಜಿಟ್‍ನಲ್ಲಿ ಶಾಲೆಗಳಲ್ಲಿ ಕಾಣಿಸುತ್ತಿದೆ. ಹೀಗಾಗಿ ನಾಳೆ ತಜ್ಞರ ಮುಂದೆ ಎಲ್ಲಾ ಅಂಕಿ ಅಂಶಗಳನ್ನು ಮುಂದೆ ಇಡುತ್ತೇವೆ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಕೊರೊನಾ ಕುರಿತು ಹಾಡು ಹಾಡಿದ ನ್ಯಾಯಾಧೀಶ!

ಈಗಾಗಲೇ 70% ಸಿಲಬಸ್ ಮುಗಿಸಲಾಗಿದೆ. ಇನ್ನು 10% ಮಾತ್ರ ಸಿಲಬಸ್ ಬಾಕಿ ಇದೆ. ಸಂಪೂರ್ಣ ಶಾಲೆಯೇ ಪಾಸಿಟಿವ್ ಆಗಿರುವ ಕೇಸ್ ಇಲ್ಲ. ಸೋಂಕು ಬಂದ ಕೂಡಲೇ ರಾಂಡಮ್ ಚೆಕ್ ಮಾಡಲಾಗಿದೆ. ತಾಂತ್ರಿಕಾ ಸಲಹಾ ಸಮಿತಿ ಒಪ್ಪಿಗೆ ಕೊಟ್ಟರೆ ಮಹಾ ನಗರಗಳಲ್ಲೂ ಶಾಲೆ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ದ. ನಾಳೆ ತಜ್ಞರ ಮುಂದು ಶಾಲೆ ಅಂಕಿ ಅಂಶಗಳು ಇಡುತ್ತೇವೆ. ನಾಳೆಯ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡ್ತೀವಿ. ತಜ್ಞರು ಕೊಡೋ ಅಭಿಪ್ರಾಯವೇ ಅಂತಿಮ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮಹಿಳೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್

10, 11 ಮತ್ತು 12ನೇ ತರಗತಿ ಮಕ್ಕಳಲ್ಲಿ ಪಾಸಿಟಿವಿಟಿ ದರ ಕಡಿಮೆ ಇದೆ. ಉತ್ತಮವಾದ ಹಾಜರಾತಿ ಶಾಲೆಗಳಲ್ಲಿ ದಾಖಲಾಗಿದೆ. ಮಕ್ಕಳ ಕಲಿಕೆ ನಾವು ನೋಡಬೇಕು. ಈ ಹಿನ್ನಲೆ ಶಾಲೆ ನಡೆಸಬೇಕು ಅನ್ನೋದು ನಮ್ಮ ಇಲಾಖೆ ಅಭಿಪ್ರಾಯ. ಆರೋಗ್ಯ ಇಲಾಖೆ ಪ್ರಕಾರ ಜನವರಿಯಿಂದ ಇಲ್ಲಿಯವರೆಗೂ ಒಟ್ಟಾರೆ ಮಕ್ಕಳಿಗೆ ಕೊರೊನಾ ಬಂದಿರುವ ಅಂಕಿಅಂಶಗಳನ್ನು ಗಮನಿಸಿದರೆ, 0-5 ವರ್ಷದ ಮಕ್ಕಳು – 13.01% ಪಾಸಿಟಿವ್, 6-15 ವರ್ಷದ ಮಕ್ಕಳು – 5.94% ಪಾಸಿಟಿವ್, 16-20 ವರ್ಷದ ಮಕ್ಕಳು – 8.17% ಪಾಸಿಟಿವ್ ಬಂದಿದೆ. ಇದುವರೆಗೂ ಕೋವಿಡ್ ಕೇಸ್ ಹಿನ್ನೆಲೆ 146 ಶಾಲೆಗಳನ್ನು ಈವರೆಗೂ ಕ್ಲೋಸ್ ಮಾಡಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *