ರಸ್ತೆಯಲ್ಲಿಯೇ ವಿದ್ಯಾರ್ಥಿಗಳಿಂದ ಜಿಮ್ನಾಸ್ಟಿಕ್ಸ್ – ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗ ಸುದ್ದಿಗಳು ವೈರಲ್ ಆಗುತ್ತಿರುತ್ತದೆ. ಇದರಿಂದ ಪ್ರತಿಭೆ ಇರುವ ಅನೇಕರನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಇತ್ತೀಚೆಗೆ ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗ ಅವರು ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇದೇ ಸಾಲಿಗೆ ಶಾಲಾ ವಿದ್ಯಾರ್ಥಿಗಳಿಬ್ಬರು ಸೇರ್ಪಡೆಯಾಗಿದ್ದಾಳೆ.

ಇಬ್ಬರು ಶಾಲಾ ಮಕ್ಕಳು ರಸ್ತೆಯಲ್ಲಿಯೇ ಕಠಿಣವಾದ ಜಿಮ್ನಾಸ್ಟಿಕ್ಸ್ ಕಸರತ್ತನ್ನು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಒಟ್ಟಿಗೆ ರಸ್ತೆಯಲ್ಲಿ ಶಾಲಾ ಸಮವಸ್ತ್ರ ಧರಿಸಿಕೊಂಡು ಹೋಗುತ್ತಿದ್ದರು. ಮೊದಲಿಗೆ ಹುಡುಗ ಓಡಿ ಹೋಗಿ ಜಿಮ್ನಾಸ್ಟಿಕ್ಸ್ ಕಸರಸ್ತು ಮಾಡಿದ್ದಾನೆ. ನಂತರ ಬಾಲಕಿ ಕೂಡ ಓಡಿ ಬಂದು ಎರಡು ಬಾರಿ ಜಿಮ್ನಾಸ್ಟಿಕ್ಸ್ ಮಾಡಿರುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ಕೇವಲ 16 ಸೆಕೆಂಡ್‍ಗಳಿದ್ದು, ನಿವೃತ್ತ ರೊಮೇನಿಯನ್ ಜಿಮ್ನಾಸ್ಟಿಕ್ ನಾಡಿಯಾ ಕೋಮನೆಸಿಯ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ವಿಡಿಯೋಗೆ ‘ಅದ್ಭುತ’ ಎಂದು ಶೀರ್ಷಿಕೆ ಕೊಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದುವರೆಗೂ ವಿಡಿಯೋ 10.14 ಲಕ್ಷ ವ್ಯೂವ್ಸ್ ಕಂಡಿದೆ. ಅನೇಕ ನೆಟ್ಟಿಗರು ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಾಡಿಯಾ ಕೋಮನೆಸಿಯ ಅವರು ಐದು ಬಾರಿ ಒಲಿಂಪಿಕ್ ಚಿನ್ನದ ಪದಕ ಗೆದ್ದಿದ್ದಾರೆ.

Comments

Leave a Reply

Your email address will not be published. Required fields are marked *