ಒಂದೂವರೆ ವರ್ಷ ಮುಚ್ಚಿದ್ದ ಶಾಲಾ ಕೊಠಡಿಯಲ್ಲಿ ಕಾಂಡೋಮ್‌ ಪತ್ತೆ

raichur school

-ಶಾಲೆಯ ಪರಿಸ್ಥಿತಿ ಕಂಡು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಲ್ಲಿ ಬೇಸರ

ರಾಯಚೂರು: ಒಂದೂವರೆ ವರ್ಷದ ಬಳಿಕ ಇಂದು ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿವೆ. ರಾಯಚೂರಿನಲ್ಲಿ ಸೋಮವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಶಾಲೆಯಲ್ಲಿ ಕಾಂಡೋಮ್‌ ಕಂಡು ಬೇಸರಗೊಂಡಿದ್ದಾರೆ.

ರಾಯಚೂರು ನಗರದ ಆಸ್ಮಿಯಾ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ ಕೆಲ ಕೊಠಡಿಗಳನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಶಿಕ್ಷಕರಿಂದಲೂ ಪುಂಡರ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಅಲ್ಲದೇ ಸೋಲಾರ್ ವ್ಯವಸ್ಥೆ ಹಾಗೂ ಕಿಟಕಿಗಳನ್ನು ಹಾಳು ಮಾಡಿದ್ದಾರೆ. ಕೊಠಡಿಗಳು ಹಾಗೂ ಶಾಲಾ ಆವರಣದಲ್ಲಿ ಎಲ್ಲಿ ನೋಡಿದರೂ ಕಾಂಡೋಮ್‌ಗಳು ಬಿದ್ದಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

raichur school

ಈ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡಿ ಶಾಲೆಗೆ ರಕ್ಷಣೆ ನೀಡುವಂತೆ ಹಾಗೂ ಶಾಲಾ ಕಾಂಪೌಂಡ್ ಗೋಡೆ ಎತ್ತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ತಿಳಿಸಿದ್ದಾರೆ. ಇದನ್ನೂ ಓದಿ: ಟಾಟಾ ಉತ್ಪನ್ನದ ಗೋದಾಮಿಗೆ ಆಕಸ್ಮಿಕ ಬೆಂಕಿ – ದಿನ ಬಳಕೆಯ ವಸ್ತುಗಳು ಬೆಂಕಿಗಾಹುತಿ

Comments

Leave a Reply

Your email address will not be published. Required fields are marked *