ಪ್ರವಾಸಕ್ಕೆ ಬಂದಿದ್ದ 57 ವಿದ್ಯಾರ್ಥಿಗಳು ಫುಟ್‍ಪಾತ್‍ನಲ್ಲಿ ಮಲಗಿದ್ರು!

ಪಾಟ್ನಾ: ಬಿಹಾರದಲ್ಲಿ ಪ್ರವಾಸಕ್ಕೆ ಬಂದಿದ್ದ ಮಕ್ಕಳು ಶಿಕ್ಷಕರ ಬೇಜವಾಬ್ದಾರಿಯಿಂದ ರಸ್ತೆಯಲ್ಲೇ ಮಲಗಿ ಸುದ್ದಿಯಾಗಿದ್ದಾರೆ.

ಚಂಪಾರಣ್ ಸರ್ಕಾರಿ ಶಾಲೆಯ 57 ಮಕ್ಕಳನ್ನು ‘ಮುಖ್ಯಮಂತ್ರಿ ಬಿಹಾರ್ ದರ್ಶನ ಯೋಜನೆ’ ಅಡಿಯಲ್ಲಿ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಪ್ರವಾಸಕ್ಕೆಂದು ಸರ್ಕಾರ ಊಟ ತಿಂಡಿ ಸೇರಿದಂತೆ 20 ಸಾವಿರ ರೂ. ಮಂಜೂರು ಮಾಡಿತ್ತು. ಅದರಂತೆ ಮಕ್ಕಳನ್ನು ಐತಿಹಾಸಿಕ ತಾಣಗಳಾದ ನಳಂದ ವಿಶ್ವವಿದ್ಯಾಲಯ, ರಾಜ್‍ಗಿರ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಪಾಟ್ನಾದ ಮೃಗಾಲಯಕ್ಕೆ ಕರೆತರಲಾಗಿತ್ತು.

ಮೃಗಾಲಯವನ್ನು ವಿಕ್ಷಿಸಿದ ಬಳಿಕ ಮಕ್ಕಳು ಧಣಿದಿದ್ದಾರೆ ಎಂದು ಶಿಕ್ಷಕರೊಬ್ಬರು ಅಲ್ಲೇ ರಸ್ತೆಯ ಬದಿಯ ಫುಟ್‍ಪಾತ್‍ನಲ್ಲೇ ಮಲಗಿಸಿದ್ದಾರೆ.

ಮೃಗಾಲಯದ ಸುತ್ತ ಎಲ್ಲೂ ಹೋಟೆಲ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮಕ್ಕಳಿಗೆ ಹಸಿವಾದ್ದರಿಂದ ನಾವೇ ಮಾಡಿದ ಅಡುಗೆಯನ್ನು ಮಾಡಿ, ಅಲ್ಲೇ ಅಲ್ಲಿಯೇ ಮಲಗಿ ಮುಂಜಾನೆ ಎದ್ದು ತೆರಳಿದ್ದೇವೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.

ಮಕ್ಕಳಿಗೆ ಮಲಗಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸದೇ, ಶಾಲಾ ಸಿಬ್ಬಂದಿ ಬೀದಿಯಲ್ಲಿ ಟರ್ಪಲ್ ಹಾಸಿ ಮಕ್ಕಳನ್ನು ಮಲಗಿಸಿ ನಿರ್ಲಕ್ಷ್ಯವನ್ನು ತೋರಿದ್ದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *