ಗ್ರಾಹಕರಿಗೆ ಎಸ್‍ಬಿಐನಿಂದ ಗುಡ್ ನ್ಯೂಸ್: ಬಡ್ಡಿದರದಲ್ಲಿ ಹೆಚ್ಚಳ

ನವದೆಹಲಿ: ಭಾರತೀತ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೊಂದು ಗುಡ್ ನ್ಯೂಸ್ ನೀಡಿದೆ. ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಯ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. ಹೊಸ ಬಡ್ಡಿ ದರಗಳು ಇದೇ ಜುಲೈ 30ರಿಂದ ಅನ್ವಯವಾಗಲಿದೆ ಎಂದು ಎಸ್‍ಬಿಐ ತಿಳಿಸಿದೆ.

ಹೊಸ ಬಡ್ಡಿ ದರಗಳು 1 ಕೋಟಿ ರೂ. ಗಿಂತಲೂ ಕಡಿಮೆಯುಳ್ಳ ನಿಶ್ಚಿತ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ನಿಶ್ಚಿತ ಠೇವಣಿಗಳ ಮೇಲೆ ಹೊಸ ಬಡ್ಡಿ ದರಗಳು ಅನ್ವಯಿಸಲಿವೆ.

ಸಾಮಾನ್ಯ ಗ್ರಾಹಕರಿಗೆ:
ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಠೇವಣಿಗಳ ಮೇಲಿನ ಶೇಖಡವಾರು ಬಡ್ಡಿದರ 6.65 ರಿಂದ 6.7ಕ್ಕೆ (0.5) ಹೆಚ್ಚಳವಾಗಿದೆ. ಎರಡು ವರ್ಷಗಳ ಮೇಲ್ಪಟ್ಟ 3 ವರ್ಷದೊಳಗಿನ ಠೇವಣಿ ಮೇಲೆ 6.65ರಿಂದ 6.75 (0.10), ಮೂರು ವರ್ಷಕ್ಕಿಂತ ಮೇಲ್ಪಟ್ಟ ಐದು ವರ್ಷದೊಳಗಿನ ಠೇವಣಿ ದರ 6.70ರಿಂದ 6.80 (0.10) ಮತ್ತು ಐದು ವರ್ಷಕ್ಕಿಂತ ಮೇಲ್ಟಟ್ಟ ಹತ್ತು ವರ್ಷದೊಳಗಿನ ಠೇವಣಿಗೆ 6.75ರಿಂದ 6.85 (0.10) ವರಗೆ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ.

ಹಿರಿಯ ನಾಗರಿಕರು:
ಹಿರಿಯ ನಾಗರಿಕ ಗ್ರಾಹಕರಿಗೆ 1 ರಿಂದ 2 ವರ್ಷದೊಳಗಿನ ಠೇವಣಿ ಬಡ್ಡಿ ದರ 7.15 ರಿಂದ 7.20 (0.10), ಎರಡು ವರ್ಷ ಮೇಲ್ಪಟ್ಟ 3 ವರ್ಷದೊಳಗಿನ ಠೇವಣಿಗೆ 7.15ರಿಂದ 7.25 (0.10), ಮೂರು ವರ್ಷಕ್ಕಿಂತ ಮೇಲ್ಪಟ್ಟ 5 ವರ್ಷದೊಳಗಿನ ಠೇವಣಿಗೆ 7.20 ರಿಂದ 7.30 (0.10) ಮತ್ತು ಐದು ವರ್ಷಕ್ಕಿಂತ ಮೇಲ್ಪಟ್ಟ 10 ವರ್ಷದೊಳಗಿನ ಠೇವಣಿಗೆ ಶೇಕಡವಾರು 7.25ರಿಂದ 7.35 (0.10)ಕ್ಕೆ ಹೆಚ್ಚಳ ಮಾಡಲಾಗಿದೆ.

Comments

Leave a Reply

Your email address will not be published. Required fields are marked *