ಹಿಂದೂ ದೇವಾಲಯಗಳ ತೆರವು ವಿರೋಧ: ಸರ್ಕಾರದ ವಿರುದ್ಧ ಭಜರಂಗದಳ ಆಕ್ರೋಶ

ನೆಲಮಂಗಲ: ತಾಲೂಕಿನ 20 ದೇವಾಲಯಗಳನ್ನ ಉಳಿಸುವಂತೆ ಭಜರಂಗದಳದ ಕಾರ್ಯಕರ್ತರು ಪಬ್ಲಿಕ್ ಟಿವಿಯ ಅಭಿಯಾನಕ್ಕೆ ಕೈಜೋಡಿಸಿ ದೇವಾಲಯಗಳನ್ನು ಉಳಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬರೋಬ್ಬರಿ, 75 ಅನಾಧಿಕೃತ ದೇವಾಲಯಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿಯನ್ನ ನಿಗದಿ ಮಾಡಿದೆ. ಇದೇ ರೀತಿಯಲ್ಲಿ ನೆಲಮಂಗಲ ತಾಲೂಕಿನ 20 ದೇವಾಲಯಗಳ ತೆರವಿಗೆ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ಮನೆಗಳ ಹಕ್ಕು ಪತ್ರ ಕೊಡಿಸಲು ಒತ್ತಾಯ – ರೈತ ಸಂಘದಿಂದ ಹಾಸನದಲ್ಲಿ ಪ್ರತಿಭಟನೆ

ಈಗಾಗಲೇ ಎರಡು ದೇವಾಲಯಗಳನ್ನ ನೆಲಮಂಗಲ ತಾಲೂಕು ಆಡಳಿತ ಜನರ ವಿರೋಧದ ನಡುವೆಯೂ ತೆರವು ಮಾಡಿದೆ. ಇಂದು ಸಾಂಕೇತಿಕವಾಗಿ ನೆಲಮಂಗಲ ನಗರದ ರಾಮಾಂಜನೇಯ ದೇವಾಲಯದಲ್ಲಿ ಭಜರಂಗಿ ಹನುಮನನ್ನ ಉಳಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷ- ನಡುಗಡ್ಡೆ ದೇವಾಲಯಗಳಿಗೆ ತೆರಳಲು ಭಕ್ತರಲ್ಲಿ ಆತಂಕ

ಈ ದೇವಾಲಯ ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಗುರುತು ಮಾಡಿರುವ ದೇವಸ್ಥಾನವಾಗಿದೆ. ಇದು ಸುಮಾರು ಮೂವತ್ತು ವರ್ಷಗಳ ಹಳೆಯ ಹನುಮಂತನ ದೇವಾಲಯವಾಗಿದ್ದು, ನಂಬಿದ ಭಕ್ತರಿಗೆ ರಕ್ಷೆ ನೀಡುವ ಪ್ರತೀತಿಯನ್ನ ಹೊಂದಿರುವ ದೇವಾಲಯವಾಗಿದೆ. ಇಂತಹ ದೇವಸ್ಥಾನಗಳ ತೆರುವನ್ನು ಸರ್ಕಾರ ಕೈಬಿಡಬೇಕು ಎಂದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ನಡೆಸುವುದಾಗಿ ಧಿಕ್ಕಾರ ಕೂಗಿ ಎಚ್ಚರಿಕೆಯನ್ನು ನೀಡಿದರು.

 

Comments

Leave a Reply

Your email address will not be published. Required fields are marked *