ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳು ವಿಭಿನ್ನವಾಗಿ ಸಾರ್ವಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಮೆಗಾ ಪ್ಲ್ಯಾನ್ ಸಿದ್ಧಪಡಿಸಿವೆ.

ಹೌದು. ರಾಜ್ಯದಲ್ಲಿ ವೀರ ಸಾವರ್ಕರ್ ವಿವಾದ ದಿನೇ ದಿನೇ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ಶುರುವಾದ ವಿವಾದ ಸದ್ಯ ಎಲ್ಲೆಡೆ ಹರಡ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಈ ಬಾರಿಯ ಗಣೇಶೋತ್ಸವದ ಮೂಲಕವೇ ಸಾವರ್ಕರ್‍ಗೆ ಇಡೀ ರಾಜ್ಯಾದ್ಯಂತ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ.

ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆಯೊಡೆಯೋಕೆ ಶಿವಮೊಗ್ಗದ ಘಟನೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂದೂ ಕಾರ್ಯಕರ್ತರನ್ನ ಬೆಂಕಿಯಾಗಿಸಿದೆ. ಇತ್ತೀಚಿಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆಗಳು ಸೇರಿದಂತೆ ಹಲವು ವಿಚಾರಗಳು ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ಎಲ್ಲಾ ಕಾರಣಕ್ಕಾಗಿಯೇ ಹಿಂದೂಗಳನ್ನ ಈ ಮೂಲಕ ಒಗ್ಗೂಡಿಸಬೇಕು ಜೊತೆಗೆ ಸಾವರ್ಕರ್ ವಿರೋಧಿಗಳಿಗೂ ತಕ್ಕ ಉತ್ತರ ಕಲಿಸಲೇಬೇಕು ಅನ್ನೋ ನಿಟ್ಟಿನಲ್ಲಿ ಸಿಡಿದಿದ್ದಾರೆ.‌

ಹಿಂದೂ ಸಂಘಟನೆಗಳ ಈ ಮೆಗಾ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಇದಕ್ಕೆ ಬದ್ಧನಾಗಿರಲಿದ್ದು. ಯಾರು ಬಂದು ಫೋಟೋ ತೆಗೆಸುತ್ತಾರೋ ನೋಡೇ ಬಿಡೋಣ ಎಂಬ ಸವಾಲಾಕಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಬಗೆಗಿನ ಜೀವನ ಚರಿತ್ರೆ, ವೀಡಿಯೋಗಳು, ಅವರ ಬಗೆಗಿನ ಪುಸ್ತಕವನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲೂ ಸಂಘಟನೆಗಳು ಚಿಂತನೆ ನಡೆಸಿವೆ. ಜೊತೆಗೆ ಭಾರತದಲ್ಲಿ ಮತ್ತೆ ಸಾವರ್ಕರ್ ಯುಗವನ್ನ ಆರಂಭಿಸುತ್ತೇವೆ. ಹಾಗಾಗಿ ಈ ಬಾರಿಯ ಗಣೇಶೋತ್ಸವ ಸಾವರ್ಕರ್ ಗಣೇಶೋತ್ಸವ ಆಗಲಿದೆ ಅಂತಿದ್ದಾರೆ.

ಸಾವರ್ಕರ್ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಹಲವು ವಿವಾದಗಳ ಜೊತೆ ತಿಕ್ಕಾಟಗಳು ಕೂಡ ಒಂದರ ಹಿಂದೊಂದು ಆರಂಭವಾಗ್ತಿವೆ. ಈ ವಿವಾದ ಮತ್ತೆಲ್ಲಿಗೆ ಹೋಗಿ ತಲುಪಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *