ಅರ್ಜೆಂಟೀನಾ ವಿರುದ್ಧ ಗೆಲುವು – ಸಂಭ್ರಮಾಚರಣೆಗಾಗಿ ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

Saudi Arabia

ಕತಾರ್: ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಟೂರ್ನಿಯಲ್ಲಿ ಕೂಟದ ಬಲಿಷ್ಠ ತಂಡ ಲಿಯೋನೆಲ್ ಮೆಸ್ಸಿ (Lionel Messi)  ಸಾರಥ್ಯದ ಅರ್ಜೆಂಟೀನಾ (Argentina) ವಿರುದ್ಧ ಸೌದಿ ಅರೇಬಿಯಾ (Saudi Arabia) 2-1 ಗೋಲುಗಳ ಅಂತರದ ಜಯ ಸಾಧಿಸಿ ಮೆರೆದಾಡಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ನಾಳೆ ರಾಷ್ಟ್ರೀಯ ರಜೆ (National Holiday) ಘೋಷಿಸಿ ಸಂಭ್ರಮಿಸಲು ಮುಂದಾಗಿದೆ.

ಯಶಸ್ವಿ ತಂಡ 2 ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಮಿಂಚಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅರ್ಜೆಂಟೀನಾ ವಿರುದ್ಧದ ವಿಜಯವನ್ನು ಆಚರಿಸಲು ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಸೌದಿ ಅರೇಬಿಯಾ ರಾಕ್ ಅರ್ಜೆಂಟೀನಾಗೆ ಶಾಕ್ – ಮೆಸ್ಸಿ ತಂಡಕ್ಕೆ ಸೋಲಿನ ಆರಂಭ

ಕತಾರ್‌ನ (Qatar) ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್‍ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಅಭಿಮಾನಿಗಳು ಫುಟ್‍ಬಾಲ್ ದಿಗ್ಗಜನ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಇದನ್ನೂ ಓದಿ: ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

ಬಳಿಕ ನಡೆದದ್ದು ಸೌದಿ ಅರೇಬಿಯಾದ ಕಾಲ್ಚೆಂಡು ಕರಾಮತ್ತು. ಬಲಿಷ್ಠ ಅರ್ಜೆಂಟೀನಾಗೆ ಸೆಡ್ಡು ಹೊಡೆಯುವ ಮಟ್ಟಿಗೆ ಸೌದಿ ಅರೇಬಿಯಾ ತಂಡ ಪುಟಿದೆದ್ದಿತು. 48ನೇ ನಿಮಿಷದಲ್ಲಿ ಸಲೇಹ್ ಅಲ್-ಶೆಹ್ರಿ ಸಿಡಿಸಿದ ಗೋಲಿನಿಂದ ಎರಡೂ ತಂಡಗಳು 1-1ರಲ್ಲಿ ಸಮಬಲದ ಹೋರಾಟ ನಡೆಸಿದವು. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ

ನಂತರ ಸೌದಿ ಅರೇಬಿಯಾ ಮತ್ತೆ ತಮ್ಮ ಸೂಪರ್ ಡೂಪರ್ ಪ್ರದರ್ಶನ ಮುಂದುವರಿಸಿ 53ನೇ ನಿಮಿಷದಲ್ಲಿ ಸೇಲಂ ಅಲ್ದಾವ್ಸರಿ ಸಿಡಿಸಿದ ಗೋಲಿನಿಂದ 2-1 ಮುನ್ನಡೆ ಪಡೆದುಕೊಂಡಿತು. ಈ ಮುನ್ನಡೆಯನ್ನು ಪಂದ್ಯದ ಅತ್ಯಂದ ವರೆಗೆ ಕಾಯ್ದುಕೊಂಡು ಕೂಟದ ಬಲಿಷ್ಠ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಗೆಲುವಿನ ಆರಂಭ ಪಡೆದಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *