ಸತೀಶ್ ಪಾಟೀಲ್ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 32ಕ್ಕೆ ಏರಿಕೆ

ಬೆಳಗಾವಿ: ಮೂರು ದಿನಗಳ ಹಿಂದೆ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದ್ದ ಸತೀಶ್ ಪಾಟೀಲ್ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದ್ದು, ಹಿಂಸಾಚಾರ ಪ್ರಕರಣದಲ್ಲಿ 22 ಆರೋಪಿಗಳನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನಂದ ಕುಟ್ರೆ(60), ಜಾಯಪ್ಪ ನೀಲಜಕರ(52), ಸುರೇಖಾ ನೀಲಜಕರ(47), ಸಂಜನಾ ನೀಲಜಕರ(21), ವೆಂಕಟೇಶ್‌ ಕುಟ್ರೆ(50), ದೌಲತ್ ಮುತಗೇಕರ(21), ಲಖನ್ ನೀಲಜಕರ(25), ಲಕ್ಷ್ಮಿ ಕುಟ್ರೆ(45), ಸಂಗೀತಾ ಕುಟ್ರೆ(45) ಹಾಗೂ ಶಶಿಕಲಾ ಕುಟ್ರೆ(50) ಬಂಧಿತರು. ಜೂನ್ 18ರ ರಾತ್ರಿ ಸತೀಶ್ ಪಾಟೀಲ್ ಹತ್ಯೆ ನಡೆದಿತ್ತು. ಕಾರು ಪಾರ್ಕಿಂಗ್ ವಿಚಾರಕ್ಕೆ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಸತೀಶ್ ಹತ್ಯೆ ಬಳಿಕ ಗ್ರಾಮದಲ್ಲಿ ವಾಹನ, ಬಣವೆಗೆ ಉದ್ರಿಕ್ತರು ಬೆಂಕಿ ಇಟ್ಟಿದ್ದರು. ಇದನ್ನೂ ಓದಿ:  ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ

 

ಹಳೆ ವೈಷಮ್ಯ
ಗ್ರಾಮದ ದೇವಸ್ಥಾನದ ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಪಡೆದುಕೊಂಡಿದ್ದರು. ದೇವಸ್ಥಾನದ ಜಾಗ ಮರಳಿ ಸಿಗಬೇಕೆಂದು ಸತೀಶ್ ಪಾಟೀಲ್ ಹೋರಾಟ ಮಾಡ್ತಿದ್ದರು. ಇದೇ ವೈಷಮ್ಯಕ್ಕೆ ಸತೀಶ್ ಪಾಟೀಲ್ ಹತ್ಯೆ ಮಾಡಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ – ವ್ಯಕ್ತಿ ಬರ್ಬರ ಹತ್ಯೆ

ಕೊಲೆ ಬಳಿಕ ನಡೆದ ಹಿಂಸಾಚಾರ ಸಂಬಂಧ ಕಾಕತಿ ಠಾಣೆ ಪೊಲೀಸರು 22 ಆರೋಪಿಗಳ ಬಂಧಿಸಿದ್ದಾರೆ. ಕೊಲೆ ಹಾಗೂ ಹಿಂಸಾಚಾರ ಎರಡೂ ಪ್ರಕರಣಗಳ ಸಂಬಂಧ ಬಂಧಿತರ ಸಂಖ್ಯೆ ಒಟ್ಟು 32ಕ್ಕೆ ಏರಿಕೆಯಾಗಿದೆ.

Live Tv

Comments

Leave a Reply

Your email address will not be published. Required fields are marked *