ಹಿಜಬ್ ಪರವಾಗಿ ಕಾಂಗ್ರೆಸ್ ಪಕ್ಷ ಇದೆ: ಸತೀಶ್ ಜಾರಕಿಹೊಳಿ

satish jarkiholi

ಬೆಳಗಾವಿ: ಹಿಜಬ್ ಪರವಾಗಿ ನಮ್ಮ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಹಿಜಬ್ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಯಾವ ಉಡುಪು ಹಾಕಿಕೊಳ್ಳಬೇಕು. ಯಾವ ಬಣ್ಣದ ಉಡುಪು ಹಾಕಬೇಕು ಅವರಿಗೆ ಬಿಟ್ಟ ವಿಚಾರವಾಗಿದೆ. ನೀವು ಇಂತಹದ್ದೇ ಹಾಕಿಕೊಳ್ಳಿ ಅಂತಾ ಹೇಳುವ ಅಧಿಕಾರ ಯಾರಿಗೂ ಇಲ್ಲ.  ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣ – ರಮೇಶ್ ಜಾರಕಿಹೊಳಿಗಿಲ್ಲ ಮುಕ್ತಿ

ಸರ್ಕಾರ ಇದರ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕು. ಆಡಳಿತ ಮಂಡಳಿಯವರು ಮುಂದಾಗಬೇಕು. ಶಿಕ್ಷಣದ ಸಮಯದಲ್ಲಿ ಧರ್ಮ ಜಾತಿ ಜತೆಗೆ ಹೋದರೆ ಬದುಕು ಹಾಳಾಗುತ್ತದೆ. ಸರ್ಕಾರ  ಈ ವಿಚಾರವನ್ನು ಬೇಗ ಮುಗಿಸಬೇಕು. ಇಲ್ಲವಾದರೆ ಇದು  ಕೋವಿಡ್‌ ತರಹ ಹೇಗೆ ಸುಮಾರು ವರ್ಷಗಳಿಂದ ಸಮಸ್ಯೆ ಆಯ್ತು, ಹಾಗೇ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯತ್ನಾಳ್ ಸತ್ತಿದ್ದಾರೆ, ಅದಕ್ಕಾಗಿ ಶವಯಾತ್ರೆ ಮಾಡ್ತಿದ್ದೇವೆ: ಮೊಹಮ್ಮದ್ ನಲಪಾಡ್

ಹಳ್ಳಿ ಹಳ್ಳಿಗಳಿಗೂ ಹಿಜಬ್ – ಕೇಸರಿ ಶಾಲು ಸಂಘರ್ಷ ವ್ಯಾಪಿಸುತ್ತಿರುವ ವಿಚಾರಕ್ಕೆ, ಮೊದಲು ಕೇಸರಿ ಶಾಲು ಹಾಕುವವರು ಏಕೆ ಹಾಕುತ್ತಿದ್ದೇವೆ ಅಂತಾ ಗೊತ್ತಿರಲ್ಲ.ಕೆಲವರು ಗೊತ್ತಿಲ್ಲದೇ ಹೋರಾಟಕ್ಕಿಳೀತಾರೆ. ಕೆಲವರು ಗೊತ್ತಿದ್ದು, ಹೋರಾಟಕ್ಕಿಳೀತಾರೆ. ಗೊತ್ತಿದ್ದವರು ದಾರಿ ತಪ್ಪಿಸಲು ನೋಡ್ತಾರೆ. ವಸ್ತುಸ್ಥಿತಿ ಅರಿವಾದಾಗ ವಿದ್ಯಾರ್ಥಿಗಳು ಬದಲಾಗುತ್ತಾರೆ.ಸ್ವಲ್ಪ ಟೈಮ್ ಬೇಕಾಗುತ್ತೆ, ಬದಲಾಗುತ್ತಾರೆ. ನನ್ನ ಹೋರಾಟ ಎಷ್ಟು ಸರಿ ಇದೆ ಅಂತಾ ಅವರಿಗೆ ಕನ್ವಿನ್ಸ್ ಆಗಬೇಕು. ಹಿಂದೆ ಸಿಎಎ, ಎನ್‍ಆರ್‍ಸಿ ಬಗ್ಗೆ ಸಾಕಷ್ಟು ದೊಡ್ಡ ದೊಡ್ಡ ಪ್ರತಿಭಟನೆ ಆಗಿದ್ದವು. ನಿಜಾಂಶ ಗೊತ್ತಾದ ಮೇಲೆ ತಾನಾಗಿಯೇ ಸ್ಲೋ ಆಗಿ ಡೌನ್ ಆಯ್ತು. ಇದು ಅದೇ ರೀತಿ ಕೇಸರಿ ಶಾಲು ಹಾಕೋರಿಗೆ ಗೊತ್ತಾದರೆ ಡೌನ್ ಆಗುತ್ತೆ, ಸ್ವಲ್ಪ ಟೈಮ್ ಬೇಕಾಗುತ್ತದೆ ಎಂದರು. ಇದನ್ನೂ ಓದಿ: ಹಿಜಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

Comments

Leave a Reply

Your email address will not be published. Required fields are marked *