ಪರಪ್ಪನ ಅಗ್ರಹಾರದಲ್ಲಿರೋ ಶಶಿಕಲಾಗೆ ಅನಾರೋಗ್ಯ – ಜೈಲಾಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಶಶಿಕಲಾಗೆ ತೀವ್ರ ಜ್ವರ, ಶೀತ ಕಾಣಿಸಿಕೊಂಡಿದೆ.

ಸಕ್ಕರೆ ಕಾಯಿಲೆಯಿಂದ ಬಳಲ್ತಾ ಇರೋ ಶಶಿಕಲಾಗೆ ಕಳೆದ 2 ದಿನಗಳಿಂದ ನಿರಂತರವಾಗಿ ಜ್ವರ ಕಾಡ್ತಾ ಇದ್ದು, ಜೈಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿದಿದೆ. ಒಂದು ವೇಳೆ ಆರೋಗ್ಯ ಸುಧಾರಿಸದಿದ್ದಲ್ಲಿ ಶಶಿಕಲಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯೋ ಸಾಧ್ಯತೆ ಇದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಶಿಕ್ಷೆ ಅನುಭವಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *