ಪಾಕ್ ಕ್ಯಾಪ್ಟನ್‍ಗೆ ‘ಹಂದಿ’ ಎಂದ ಅಭಿಮಾನಿ – ವಿಡಿಯೋ ವೈರಲ್

ಲಂಡನ್: ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸಾಬೀತಾಗುತಿದ್ದು, ಭಾರತ ವಿರುದ್ಧದ ಸೋಲುಂಡ ಬಳಿಕ ಪಾಕ್ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿತ್ತು. ಸದ್ಯ ಅಭಿಮಾನಿಗಳ ಆಕ್ರೋಶದ ಬಿಸಿ ನೇರ ತಂಡದ ನಾಯಕ ಸರ್ಫರಾಜ್ ಅಹಮದ್‍ಗೆ ತಟ್ಟಿದೆ.

ಪಂದ್ಯ ನಡೆದ ದಿನದಿಂದಲೂ ಪಾಕ್ ತಂಡದ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದರು. ಆದರೆ ಈ ಬಾರಿ ಅಭಿಮಾನಿಯೊಬ್ಬ ಒಂದು ಹೆಜ್ಜೆ ಮುಂದೆ ಹೋಗಿದ್ದು, ನಾಯಕ ಸರ್ಫರಾಜ್ ಖಾನ್ ರನ್ನು ನೇರ ಟೀಕೆ ಮಾಡಿ ವಿಡಿಯೋ ಹರಿಬಿಟ್ಟಿದ್ದಾನೆ. ಸರ್ಫರಾಜ್ ಅಹಮದ್ ಶಾಪಿಂಗ್‍ಗೆ ತೆರಳಿದ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಅವರನ್ನು ಕಿಚಾಯಿಸಿದ್ದು, ಏಕೆ ನೀವು ಹಂದಿಯ ರೀತಿ ದಪ್ಪಗಿದ್ದೀರಿ. ಡಯಟ್ ಏನಾದರು ಮಾಡಿ ಎಂದು ಕಿಡಿಕಾರಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸರ್ಫರಾಜ್ ಅಹಮದ್ ಪುತ್ರನೊಂದಿಗೆ ಶಾಪಿಂಗ್ ಬಂದ ವೇಳೆ ಘಟನೆ ನಡೆದಿದ್ದು, ಇದರಿಂದ ಸರ್ಫರಾಜ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಅಭಿಮಾನಿಯೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ ಎಂದು ಹತ್ತಿರ ಬಂದ ಸರ್ಫರಾಜ್ ಆತನ ಮಾತು ಕೇಳಿ ಏಕಾಏಕಿ ದಂಗಾಗಿದ್ದು, ಬಳಿಕ ಅಲ್ಲಿಂದ ತೆರಳಿದ್ದಾರೆ. ಇತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಅಭಿಮಾನಿ ಯೂಟ್ಯೂಬ್ ನಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಕ್ಷಮೆ ಕೋರಿದ್ದಾನೆ.

https://www.youtube.com/watch?time_continue=80&v=GVs7uaDGf6M

ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೊಯಿಬ್ ಅಖ್ತರ್ ಕೂಡ ಸರ್ಫರಾಜ್ ಖಾನ್ ದಪ್ಪವಾಗಿರುವ ಬಗ್ಗೆ ಟೀಕೆ ಮಾಡಿದ್ದರು. ಇಷ್ಟು ದಪ್ಪ ಆಗಿರುವ ನಾಯಕನನ್ನು ನಾನು ನೋಡಿಲ್ಲ, ಈತ ತಂಡದ ನಾಯಕನಾಗಲು ಅರ್ಹರಲ್ಲ ಎಂದಿದ್ದರು.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಫಿಟ್ನೆಸ್ ಸಮಸ್ಯೆ ಕಾಡುತ್ತಿದ್ದು, ಹಲವು ಆಟಗಾರರು ಫಿಲ್ಡಿಂಗ್ ನಡೆಸಲು ಸಮಸ್ಯೆ ಎದುರಿಸಿದ್ದರು. ಸದ್ಯ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಪಾಕ್ ಆಡಿರುವ 5 ಪಂದ್ಯಗಳಲ್ಲಿ 3 ಅಂಕಗಳನ್ನು ಪಡೆದು 9ನೇ ಸ್ಥಾನ ಪಡೆದಿದೆ. ಸದ್ಯ ಸೆಮಿ ಫೈನಲ್ ಪ್ರವೇಶದ ಆಸೆ ಜೀವಂತವಾಗಿಡಲು ಪಾಕಿಸ್ತಾನ ಉಳಿದ ಎಲ್ಲ 4 ಪಂದ್ಯಗಳನ್ನು ಗೆಲ್ಲಬೇಕಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Comments

Leave a Reply

Your email address will not be published. Required fields are marked *