ಮಂಡ್ಯ: ಹುಟ್ಟುಹಬ್ಬದಲ್ಲಿ ಪಾಲ್ಗೊಂಡ್ರೆ ಸೀರೆ ನೀಡೋದಾಗಿ ಟೋಕನ್ ಕೊಟ್ಟು, ನಂತ್ರ ಸೀರೆ ಕೊಡದೇ ವಂಚಿಸಿದ್ದರಿಂದ ಜಿಲ್ಲೆಯ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ಮಹಿಳೆಯರು ಕಿಡಿಕಾರುತ್ತಿದ್ದಾರೆ.

ಇಂದು ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಶ್ರೀರಂಗಪಟ್ಟಣದಲ್ಲಿ ಆಚರಿಸಿದ್ರು. ರಮೇಶ್‍ಬಾಬು ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಆರೋಗ್ಯ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ರು. ಇವುಗಳ ಜೊತೆಗೆ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಸೀರೆ ವಿತರಿಸುತ್ತೇವೆ ಅಂತಾ ಹೇಳಿ ಟೋಕನ್ ಕೂಡ ನೀಡಲಾಗಿತ್ತು.

ಟೋಕನ್ ಪಡೆದ ಮಹಿಳೆಯರು ಸೀರೆ ಕೊಡ್ತಾರಲ್ಲ ಅಂತಾ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ರು. ಆದ್ರೆ ಕಾರ್ಯಕ್ರಮ ಆಯೋಜಕರು ಕೆಲವರಿಗಷ್ಟೇ ಸೀರೆ ನೀಡಿ, ನಂತ್ರ ಸೀರೆ ಖಾಲಿಯಾಯ್ತು ಅಂತಾ ಸಬೂಬು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಮಹಿಳೆಯರು ಸೀರೆ ಕೊಡದಿದ್ರೆ ಟೋಕನ್ ಕೊಟ್ಟು ಬಿಸಿಲಲ್ಲಿ ನಮ್ಮನ್ನು ಯಾಕೆ ಕರೆಸಬೇಕಿತ್ತು ಅಂತಾ ಶಾಸಕರ ಅಭಿಮಾನಿಗಳ ವಿರುದ್ಧ ತಮ್ಮ ಕಿಡಿಕಾರಿದ್ದಾರೆ.
https://www.youtube.com/watch?v=ZVXpXOsgvWI


Leave a Reply