ಜನಬಲಕ್ಕೆ ಸೋಲಾಗಿದೆ, ನಾವು ಧೃತಿಗೆಡುವುದಿಲ್ಲ: ಶರವಣ

ಬೆಳಗಾವಿ: ವಿಧಾನ ಪರಿಷತ್ ಫಲಿತಾಂಶ ಪ್ರಕಟವಾಗಿದೆ. ಹಣಬಲ, ಜನಬಲದ ನಡುವೆ ಜನಬಲಕ್ಕೆ ಸೋಲಾಗಿದೆ. ಆದರೆ ಅದಕ್ಕೆ ನಾವು ಧೃತಿಗೆಡುವುದಿಲ್ಲ ಎಂದು ಜೆಡಿಎಸ್ ವಕ್ತಾರ ಶರವಣ ಹೇಳಿದರು.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಶರವಣ ಅವರು ಇತರ ಪಕ್ಷಗಳ ಮೋಸದ ಆಟ ನೋವು ತರುತ್ತಿದೆ. ಆದರೆ ನಮಗೆ ಜನರ ಮೇಲೆ ಅಪಾರ ವಿಶ್ವಾಸವಿದೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಜನರ ಸೇವೆ ಮಾಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ಗಮನಿಸಿ, ಡಿ.29ಕ್ಕೆ ಕೆಪಿಎಸ್‍ಸಿ ಮರುಪರೀಕ್ಷೆ – ಯಾವೆಲ್ಲ ದಾಖಲೆ ಸಲ್ಲಿಸಬೇಕು?

ಯಾವ ನೈತಿಕತೆ ಇಲ್ಲದೆ ಕುಟುಂಬ ರಾಜಕಾರಣ ಎಂದು ಬೊಬ್ಬೆ ಹೊಡೆದು ಕೊಳ್ಳುತ್ತಿರುವ ಕಾಂಗ್ರೆಸ್ ಹಾಗು ಬಿಜೆಪಿ ಅವರು ತಮ್ಮ ಕುಟುಂಬದವರು, ಸಂಬಂಧಿಕರಿಗೆ ಟಿಕೆಟ್ ನೀಡಿದೆ. ಜನಪರವಾಗಿ ಹೋರಾಡುತ್ತಿರುವ ಜೆಡಿಎಸ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕಾಂಚಾಣ ಹಂಚಿಕೆಯಿಂದ ಮೋಸದ ಗೆಲುವು ಕಂಡ ಇಂತಹ ಪಕ್ಷಗಳ ಕೊಡುಗೆ ಈ ರಾಜ್ಯಕ್ಕೆ ಏನು ಇಲ್ಲ ಎಂದು ಕಿಡಿಕಾರಿದರು.

ಮುಂಬರುವ 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಜನರು ಕೈಹಿಡಿದು ಮುನ್ನಡೆಸಲಿದ್ದಾರೆ ಎಂಬ ಭರವಸೆಯಿದೆ ಎಂದು ವಿಶ್ವಾಸದ ಮಾತನ್ನು ಆಡಿದರು. ಇದನ್ನೂ ಓದಿ: ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO

Comments

Leave a Reply

Your email address will not be published. Required fields are marked *