ಭಾರತ ಬಿಟ್ಟು ತೊಲಗಿ ಅಂತಿದ್ದಾರೆ ನಟಿ ಸಾರಾ ಆಲಿ ಖಾನ್

`ಕೇದರ್‌ನಾಥ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ನಟಿ ಸಾರಾ ಆಲಿ ಖಾನ್, ಮಾಡಿದ್ದು ಕೆಲವೇ ಕೆಲವು ಸಿನಿಮಾಗಳಾಗಿದ್ರು. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಅಂತಹದ್ದೇ ಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ. 1942 ಭಾರತ ಬಿಟ್ಟು ತೊಲಗಿ ಚಳುವಳಿಯ ಕುರಿತು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ.

ಈಗಾಗಲೇ `ಲವ್ ಆಜ್ ಕಲ್’, `ಕೂಲಿ ನಂ 1′, ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟಿ ಸಾರಾ ಈ ಬಾರಿ 1942 ನಡೆದ ಕ್ವಿಟ್ ಇಂಡಿಯಾ ಮೂಮೆಂಟ್ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ. ಭಾರತ ಬಿಟ್ಟು ತೊಲಗಿ ಎಂಬ ಚಳುವಳಿಯ ಕಥೆಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

ದಯನ್ ಕಣನ್ ಅಯ್ಯರ್ ನಿರ್ದೇಶದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಸಾರಾ ಆಲಿಯಾ ಖಾನ್ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಿದೆ. ಕರಣ್ ಜೋಹರ್ ಮತ್ತು ಧರ್ಮಟೆಕ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಮೆಗಾಸ್ಟಾರ್ ರೋಮ್ಯಾನ್ಸ್‌ಗೆ ನಾಚಿನೀರಾದ ಪೂಜಾ ಹೆಗ್ಡೆ: ವೀಡಿಯೋ ವೈರಲ್

ಸದ್ಯ ವಿಕ್ರಾಂತ್ ನಟನೆಯ ಬಹುನಿರೀಕ್ಷಿತ ಚಿತ್ರ `ಗ್ಯಾಸ್‌ಲೈಟ್’ ಚಿತ್ರದಲ್ಲಿ ಸಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗುಜ್‌ರಾತ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಾರಾ ನಟನೆಯ ಮುಂಬರುವ ಚಿತ್ರ ಕ್ವೀಟ್ ಇಂಡಿಯಾ ಮೂಮೆಂಟ್ ಚಿತ್ರದ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *