ಕಿರುತೆರೆಯತ್ತ ಸಪ್ತಮಿ- ‘ಸತ್ಯ’ ಸೀರಿಯಲ್‌ಗೆ ಕಾಂತಾರ ನಟಿ ಸಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ‘ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Sapthami Gowda) ಅವರು ಟಿವಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಪ್ತಮಿ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ಟು ಸೀರಿಯಲ್‌ಗೆ ಎಂಟ್ರಿ ಕೊಟ್ರಾ? ಅಂತ ನೀವು ಅಂದುಕೊಂಡಿರಬಹುದು. ಆದರೆ ಅಸಲಿ ವಿಚಾರ ಬೇರೆ ಇದೆ. ಇದೀಗ ಈ ಸ್ಟಾರ್ ನಟಿ ಸೀರಿಯಲ್ ಪ್ರಚಾರಕ್ಕಿಳಿದಿದ್ದಾರೆ.

ರಿಷಬ್ ಶೆಟ್ಟಿಗೆ (Rishab Shetty) ನಾಯಕಿಯಾಗಿ ‘ಕಾಂತಾರ’ ಮೂಲಕ ಸಕ್ಸಸ್ ಕಂಡ ನಟಿ ಸಪ್ತಮಿ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಕಿರುತೆರೆಗೆ ಸಪ್ತಮಿ ಹಾಜರಿ ಹಾಕಿದ್ದಾರೆ. ಇತ್ತೀಚೆಗೆ ‘ಶ್ರೀರಸ್ತು ಶುಭಮಸ್ತು’ ಮತ್ತು ‘ಅಮೃತಧಾರೆ’ (Amruthadaare) ಸೀರಿಯಲ್‌ಗೆ ಸಾಥ್ ಕೊಟ್ಟ ನಂತರ ಸತ್ಯ (Sathya Serial) ಧಾರಾವಾಹಿಗೆ ನಟಿ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸುದೀಪ್ ಗಾಗಿ ರಕ್ಷಿತ್ ಶೆಟ್ಟಿ ಸಿನಿಮಾ: ಕಿಚ್ಚ ಹೇಳಿದ್ದೇನು?

ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಬಂದಿದ್ದಾರೆ. ಈ ಹಿಂದೆ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದರು. ಅದಾದ ಬಳಿಕ ‘ಅಮೃತಧಾರೆ’ ಸೀರಿಯಲ್ ನಿರೂಪಣೆ ಮಾಡಿದ್ದರು. ಇದೀಗ ‘ಸತ್ಯ’ ಸೀರಿಯಲ್ ಕಥೆಯಲ್ಲಿ ಕಥಾನಾಯಕಿಗೆ ಸತ್ಯಗೆ ಪೊಲೀಸ್ ಆಗುವ ಕನಸಿರುತ್ತದೆ. ಆ ಕನಸನ್ನು ನಾಯಕಿ ನನಸು ಮಾಡಿಕೊಳ್ತಾರಾ ಎಂಬುದೇ ಕಥೆಯ ಎಳೆಯಾಗಿದೆ. ಇದನ್ನೇ ಸಪ್ತಮಿ ನಿರೂಪಣೆ ಮಾಡಿ ಪ್ರೇಕ್ಷಕರ ಮನಮುಟ್ಟುವಂತೆ ಹೇಳಿದ್ದಾರೆ.

‘ಕಾಂತಾರ’ ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸಪ್ತಮಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿಯೂ ಕನ್ನಡದ ಬೆಡಗಿಗೆ ಸಖತ್ ಬೇಡಿಕೆಯಿದೆ.

ತೆಲುಗು ಅಂಗಳದಲ್ಲಿ ಮೊದಲೇ ಕನ್ನಡತಿಯರ ದರ್ಬಾರ್ ಜಾಸ್ತಿಯಾಗಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್ ಮಧ್ಯೆ ಸಪ್ತಮಿ ಕೂಡ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ತಿದ್ದಾರೆ.