ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದು ಸೈ ಅನಿಸಿಕೊಂಡ ಸಾನ್ಯ ಅಯ್ಯರ್: ನಾಚಿದ ಮಳೆಹನಿ

ವಿವಾರ ಕಿಚ್ಚನ ಪಂಚಾಯತಿಯಲ್ಲಿ ಬೈಯಿಸಿಕೊಂಡು ಡಲ್ ಆಗಿದ್ದ ಸಾನ್ಯ ಅಯ್ಯರ್ (Sanya Iyer), ನಿನ್ನೆ ಬಿಂದಾಸ್ ಆಗಿ ಕುಣಿಯುವ ಮೂಲಕ ಆ ನೋವು ಮರೆತಿದ್ದಾರೆ. ಜೊತೆಗೆ ರೂಪೇಶ್ ಶೆಟ್ಟಿ (Rupesh Shetty) ಕೂಡ ಇವರಿಂದ ದೂರ ಆಗಲು ಪ್ರಯತ್ನಿಸುತ್ತಿದ್ದಾರೆ. ಸಾನ್ಯ ಜೊತೆ ರೂಪೇಶ್ ಈವರೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಈ ಎಲ್ಲ ಸಂಕಟಗಳನ್ನು ಮರೆಯಲು ಮಳೆಗೆ ಮೈಯೊಡ್ಡಿದ್ದರು ಸಾನ್ಯ. ಒಂದು ಕಡೆ ಮಳೆ, ಮತ್ತೊಂದು ಕಡೆ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡು. ಈ ಎರಡಕ್ಕೂ ಸೆಡ್ಡು ಹೊಡೆಯುವಂತೆ ಹಳದಿ ಬಣ್ಣದ ಸೀರೆಯಲ್ಲಿ ಸಾನ್ಯ ಸಖತ್ತಾಗಿ ಕಾಣಿಸುತ್ತಿದ್ದರು.

ಬೆಂಗಳೂರಿನಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಮಳೆಯಲ್ಲಿ (rain) ನೆನೆಯಬೇಕು, ಕುಣಿಯಬೇಕು (dance) ಎನ್ನುವುದು ದೊಡ್ಮನೆಯಲ್ಲಿ ಇರುವವರ ಆಸೆ ಆಗಿತ್ತು. ಮಳೆ ಬಂದಾಗೆಲ್ಲ ಈ ಬಯಕೆಯನ್ನು ಬಿಗ್ ಬಾಸ್ ಎದುರು ಇಡುತ್ತಿದ್ದರು ಮನೆಯ ಸದಸ್ಯರು. ಆದರೆ, ಅದಕ್ಕೆ ಈವರೆಗೂ ಅವಕಾಶ ಸಿಕ್ಕಿರಲಿಲ್ಲ. ನಿನ್ನೆಯೂ ಬೆಂಗಳೂರಿನಲ್ಲಿ ಜೋರಾಗಿ ಮಳೆಬಿತ್ತು. ಮತ್ತೆ ತಮ್ಮ ಆಸೆಯನ್ನು ಸದಸ್ಯರು ವ್ಯಕ್ತ ಪಡಿಸಿದರು. ಆಗ ಇದ್ದಕ್ಕಿದ್ದಂತೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡು’ ಕೇಳಿ ಬಂತು. ಹಾಡು ಕೇಳುತ್ತಿದ್ದಂತೆಯೇ ಮನೆಯ ಬಹುತೇಕ ಸದಸ್ಯರು ಮಳೆಗೆ ಮೈಯೊಡ್ಡಿದರು. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

ಹಳದಿ ಸೀರೆ, (yellow saree) ಕುತ್ತಿಗೆ ಮುಚ್ಚುವಷ್ಟು ಆಭರಣ ಧರಿಸಿದ್ದ ಸಾನ್ಯ, ಅದ್ಯಾವುದನ್ನೂ ಲೆಕ್ಕಿಸದೇ ಸ್ವಿಮಿಂಗ್ ಫುಲ್ ನತ್ತ ಕುಣಿಯುತ್ತಲೇ ಹೆಜ್ಜೆ ಹಾಕಿದರು. ಜೊತೆಗೆ ರೂಪೇಶ್ ಶೆಟ್ಟಿ ಸೇರಿದಂತೆ ಅನೇಕ ಸಹಸ್ಪರ್ಧಿಗಳು ಬಂದಿದ್ದರಿಂದ, ಅವರೊಂದಿಗೆ ಕೈ ಹಿಡಿದು ಕುಣಿದರು. ಮಳೆಯಲ್ಲಿ ನೆನೆದರು. ಹೆಚ್ಚೆಚ್ಚು ರೂಪೇಶ್ ಶೆಟ್ಟಿ ಜೊತೆಯೇ ಸೊಂಟ ಬಳಕಿಸುವ ಪ್ರಯತ್ನಿಸಿದರು. ಹಳದಿ ಸೀರೆ, ಮಳೆಯಲ್ಲಿ ತೊಯ್ದ ನಾರಿ ಎಲ್ಲವೂ ಸೂಪರ್ ಆಗಿದ್ದರಿಂದ, ಆ ವಿಡಿಯೋ ಕೂಡ ವೈರಲ್ ಆಗಿದೆ.

ರವಿವಾರ ಕಿಚ್ಚನ ಪಂಚಾಯತಿ ಮುಗಿದ ಮೇಲೆ ಸಾನ್ಯ ಮತ್ತು ರೂಪೇಶ್ ತುಂಬಾ ಬೇಸರದಲ್ಲಿದ್ದರು. ಒಂದು ಹಂತದಲ್ಲಿ ರೂಪೇಶ್ ಕಣ್ಣೀರಿಟ್ಟರು. ಇವರನ್ನು ಸಮಾಧಾನಿಸಲು ಸಾನ್ಯ ಬಂದರೂ, ತಮ್ಮತ್ತ ಸಾನ್ಯರನ್ನು ಬಿಟ್ಟುಕೊಳ್ಳಲಿಲ್ಲ ರೂಪೇಶ್. ಸರಿಯಾಗಿ ಊಟ ಮಾಡದೇ, ನಿದ್ದೆ ಮಾಡದೇ ಎರಡು ದಿನಗಳಿಂದ ರೂಪೇಶ್ ಡಲ್ ಹೊಡೆದಿದ್ದರು. ಮಳೆ ಮತ್ತು ತನ್ನಿಷ್ಟದ ಗೆಳತಿ ಜೊತೆ ಮಳೆಯಲ್ಲಿ ಡಾನ್ಸ್ ಮಾಡಿ ಮತ್ತೆ ಫ್ರೆಶ್ ಅಪ್ ಆಗಿದ್ದಾರೆ. ಸಾನ್ಯ ಮತ್ತು ರೂಪೇಶ್ ಅವರನ್ನು ಮಳೆ ಮತ್ತೆ ಒಂದು ಮಾಡಿದೆ. ಮುಂದಿನ ದಿನಗಳಲ್ಲಿ ಅವರು ಹೇಗಿರುತ್ತಾರೋ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *