ರೆಡ್ ಕಲರ್ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್

‘ಬಿಗ್ ಬಾಸ್’ (Bigg Boss Kannada) ಸೀಸನ್ 9ರ ಶೋ ಮೂಲಕ ಮನೆ ಮಾತಾದ ಕಿರಿಕ್ ಸುಂದರಿ ಸಾನ್ಯ ಅಯ್ಯರ್ (Sanya Iyer)  ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮಾಡ್ತಿರುತ್ತಾರೆ. ಈಗ ಮತ್ತೆ ಬೋಲ್ಡ್ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಪುಟ್ಟಗೌರಿ ಮದುವೆ, ಬಿಗ್ ಬಾಸ್ (Bigg Boss Kannada) ಮೂಲಕ ಪರಿಚಿತರಾದ ಸಾನ್ಯ ಅಯ್ಯರ್ ಅವರು ಸಿನಿಮಾ ವಿಚಾರಕ್ಕಿಂತ ಕಿರಿಕ್ ಮಾಡಿಕೊಂಡ ವಿಚಾರವಾಗಿಯೇ ಸದ್ದು ಮಾಡಿದ್ದು, ಜಾಸ್ತಿ. ದೊಡ್ಮನೆಯಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಅವರಿಗೇನು ಸಿಕಿಲ್ಲ. ಒಂದೊಳ್ಳೆಯ ಅವಕಾಶಕ್ಕಾಗಿ ನಟಿ ಎದುರು ನೋಡ್ತಿದ್ದಾರೆ.

ಇತ್ತೀಚಿಗಷ್ಟೇ ಖ್ಯಾತ ಬಾಲಿವುಡ್ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಿನಲ್ಲಿ ಸಾನ್ಯ ಅಯ್ಯರ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.‌ ಇದನ್ನೂ ಓದಿ:ಪವಿತ್ರಾ ಜೊತೆಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ರಿದ್ರಾ ಕೃಷ್ಣ, ಮಹೇಶ್ ಬಾಬು- ನರೇಶ್ ಹೇಳೋದೇನು?

ರೆಡ್ ಕಲರ್ ಉಡುಗೆಯಲ್ಲಿ ನಟಿ ಸಾನ್ಯ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಸಾನ್ಯ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.