ಧಾರವಾಡ: ರಾಜ್ಯಸರ್ಕಾರ ಮಲಗಿ ಬಿಟ್ಟಿದೆ, ಯಾವುದೇ ಕಾರ್ಯಕ್ರಮ ಇಲ್ಲ. ಮಳೆಯಿಂದ ಹಾನಿಯಾದ ಬೆಳೆ ನಷ್ಟ ಹಾಗೂ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರ ಎನ್ನುವುದು ಕೇವಲ ಮಾಧ್ಯಮದಲ್ಲಿ ಮಾತ್ರ ಇದೆ. ಕೋವಿಡ್ ಸಾವಿನ ಪರಿಹಾರ ಸಿಕ್ಕಿಲ್ಲ, ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಮನೆ ಕಟ್ಟಿದವರಿಗೆ ಹಣ ಬಂದಿಲ್ಲ. ಇನ್ನು ಶಿಕ್ಷಕರಿಗೆ ಸಂಬಳ ಕೂಡಾ ಮೊನ್ನೆಯಾಗಿದೆ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಸರ್ಕಾರ 7 ವರ್ಷದಿಂದ ಅಧಿಕಾರದಲ್ಲಿದೆ. ಮೋದಿ ಪ್ರತಿ ಬಜೆಟ್‍ನಲ್ಲಿ ಒಂದು ಹೊಸ ಕಾರ್ಯಕ್ರಮ ಇಟ್ಟಿರುತ್ತಾರೆ. ಮೊದಲು ಅವರು 100 ಸ್ಮಾರ್ಟ್ ಸಿಟಿ ಎಂದಿದ್ದರು. ಈಗ ಅದನ್ನು ಮರೆತು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಬುಲೆಟ್ ಟ್ರೇನ್ ಪ್ರಾರಂಭ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿದ್ದರು. ಆದರೆ ಇಂದು ಮೆಕ್ ಇನ್ ಇಂಡಿಯಾ ಹಾಗೂ ಮೆಡ್ ಇನ್ ಇಂಡಿಯಾ ಎರಡೂ ಮಾತಾಡುತ್ತಿಲ್ಲ. ಈ ಯಾವ ಕಾರ್ಯಕ್ರಮವು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದರು.

ನದಿ ಜೋಡಣೆ ಆಗಬಾರದು ಎಂದು ನಮ್ಮ ಉದ್ದೇಶ ಅಲ್ಲ, ಎಲ್ಲಾ ರಾಜ್ಯಗಳಿಗೆ ಅನುಕೂಲ ಆಗುವುದಿದ್ದರೆ ನಮ್ಮ ಅಭ್ಯಂತರ ಇಲ್ಲ ಎಂದ ಅವರು, ನಾನು ಕಂಡಂತೆ 7 ವರ್ಷದಲ್ಲಿ ಮೋದಿ ಅವರ ಯಾವುದೇ ಕಾರ್ಯಕ್ರಮ ಬಡವರ ಪರ ಆಗಿಲ್ಲ ಎಂದರು. ಇದನ್ನೂ ಓದಿ: ನೆಲಮಂಗಲದಲ್ಲಿ ಪೆಡ್ಲರ್‌ಗಳ ಬಂಧನ – 53 ಕೆ.ಜಿ ಗಾಂಜಾ ವಶ

ಬೊಮ್ಮಾಯಿ ಅವರು 6 ತಿಂಗಳಿಂದ ಸಿಎಂ ಇದ್ದಾರೆ, ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದ ಅವರು ಬಿಜೆಪಿ ಸರ್ಕಾರದಿಂದ ಯಾವ ಅಭಿವೃದ್ಧಿಯಾಗಿದೆ ಎಂದು ಬಿಜೆಪಿ ಅವರನ್ನೇ ಕೇಳಬೇಕು. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಿಲ್ಲ ಇದಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

Leave a Reply