ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

KS ESHWARAPPA

ಶಿವಮೊಗ್ಗ: ಈ ಆರೋಪದಿಂದ ನಾನು ಮುಕ್ತವಾಗಿ ಹೊರಗೆ ಬರುತ್ತೇನೆ. ನನಗೆ ಪೂರ್ಣವಿಶ್ವಾಸ ಇದೆ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ನಾಳೆ ರಾಜೀನಾಮೆ ಕೊಡುತ್ತಿದ್ದೇನೆ. ಯಾರು ನನ್ನನ್ನು ಬೆಳೆಸಿದ್ದಾರೆ, ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕರಿಗೆ ಇರಿಸು ಮುರಿಸು ಆಗಬಾರದು ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ. ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಸಲ್ಲಿಸುತ್ತೇನೆ. ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಪೂರ್ಣವಿಶ್ವಾಸ ಇದೆ. ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ. ಈ ಆರೋಪದಿಂದ ನಾನು ಮುಕ್ತವಾಗಿ ಹೊರಗೆ ಬರುತ್ತೇನೆ ಎಂದರು. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

ನನ್ನ ಮನೆ ದೇವರು ಚೌಡೇಶ್ವರಿ ನಾನು ತಪ್ಪಿತಸ್ಥನಲ್ಲ, ನಿರ್ದೋಷಿ ಎಂದು ಹೊರಗೆ ತರುತ್ತಾಳೆ. ಗ್ರಾಮೀಣಾಭಿವೃದ್ಧಿ ಇಲಾಖೆ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಇಲಾಖೆಯಲ್ಲಿ ಕೆಲಸ ಮಾಡಿ ಯಶಸ್ವಿಯಾಗುತ್ತಿದ್ದೇನೆ ಎಂಬ ಸಂತೋಷ ಇದೆ. ಪಕ್ಷದ ನಾಯಕರು, ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ನಿನ್ನೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಆತುರ ಮಾಡಬೇಡಿ ಎಂದು ಬೆಂಬಲಿಗರು ಎಂದಿದ್ದರು ಅದಕ್ಕೆ ಕೊಟ್ಟಿರಲಿಲ್ಲ. ನಾನು ದೇವರನ್ನು ನಂಬಿರುವವನು ನಾನು ತಪ್ಪುಮಾಡಿದ್ದರೆ ಶಿಕ್ಷೆ ಆಗಲಿ ಎಂದು ನುಡಿದರು. ಇದನ್ನೂ ಓದಿ: ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

Comments

Leave a Reply

Your email address will not be published. Required fields are marked *