ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

ಹುಭಾಷಾ ನಟಿ ಸಂಜನಾ ಗಲ್ರಾನಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಮಧ್ಯೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾನುವಾರ ತಮ್ಮ ಬೋಳುತಲೆ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿರುವ ಸಂಜನಾ, ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

ನನ್ನ ಜೀವನದಲ್ಲಿ ತಾಯ್ತನದ ಹಂತ ಕೊಟ್ಟಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಷ್ಟಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

ಇತ್ತೀಚಿನ ಸಂದರ್ಶನದಲ್ಲಿ ಸಂಜನಾ ಲಾಕ್‍ಡೌನ್‍ನಿಂದ ತಾವು ಕಲಿತ ಪಾಠವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಯಾವುದು ನಿಜ ಎಂಬುದನ್ನು ತಿಳಿದುಕೊಳ್ಳುವ ಪ್ರಬುದ್ಧತೆ ನನಗೆ ಕೋವಿಡ್ ಸಮಯದಲ್ಲಿ ಬಂದಿದೆ ಎಂದು ವಿವರಿಸಿದ್ದರು.

Comments

Leave a Reply

Your email address will not be published. Required fields are marked *