ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ಲವ್ ಆಗುತ್ತೆ- ತಾರಕ್ ಸಿನಿಮಾ ವಿಡಿಯೋ ಸಾಂಗ್ ನೋಡಿ

ಬೆಂಗಳೂರು: ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಿಂದ ಸಾಕಷ್ಟು ಹವಾ ಕ್ರಿಯೆಟ್ ಮಾಡಿರುವ `ತಾರಕ್’ ಸಿನಿಮಾದ ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡು ನೋಡೊದಕ್ಕೂ ಮತ್ತು ಕೇಳೊದಕ್ಕೂ ತುಂಬಾ ಕ್ಯಾಚಿಯಾಗಿದೆ.

ಹಾಡು ಈಗಾಗಲೇ ಅಭಿಮಾನಿಗಳಲ್ಲಿ ಮನದಲ್ಲಿ ಗುನುಗುಟ್ಟುತ್ತಿದೆ. ಹಳ್ಳಿ ಭಾಷೆಯನ್ನು ಹಾಡಿನಲ್ಲಿ ಬಳಸಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಡಿನಲ್ಲಿ ಎಂದಿನಂತೆ ದರ್ಶನ್ ಹುಡುಗಿಯರ ಮನಸ್ಸನ್ನು ಕದ್ದಿದ್ದು, ಇನ್ನೂ ಬ್ಯೂಟಿಫುಲ್ ಮನಸ್ಸಿನ ಹುಡುಗಿ ಶೃತಿ ಹರಿಹರನ್ ಅಷ್ಟೇ ಮುದ್ದಾಗಿ ಕಾಣಿಸುತ್ತಾರೆ.

ಲಿರಿಕ್ಸ್ ವಿಡಿಯೋ ಎರಡು ವಾರಗಳ ಹಿಂದೆಯೇ ಬಿಡುಗಡೆಗೊಂಡಿತ್ತು. ಲಿರಿಕ್ಸ್ ವಿಡಿಯೋ ಇದೂವರೆಗೂ 90 ಸಾವಿರಕ್ಕೂ ಅಧಿಕ ವ್ಯೂವ್‍ಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಬಾಲಿವುಡ್ ಸಿಂಗರ್ ಅರ್ಮಾನ್ ಮಲ್ಲಿಕ್ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾಯಕ ವ್ಯಾಸ್, ವಿಜಯ್ ಪ್ರಕಾಶ್ ಮತ್ತು ಗಾಯಕಿಯರಾದ ಶ್ರೇಯಾ ಘೋಷಾಲ್, ಇಂದು ನಾಗರಾಜ್, ನೀತಿ ಮೋಹನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.

ಇದೇ ತಿಂಗಳು 29ರಂದು ತಾರಕ್ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ಚಿತ್ರದ ಟ್ರೇಲರ್ ಮತ್ತು ಹಾಡನ್ನು ನೀವೂ ನೋಡಬಹುದು.

https://www.youtube.com/watch?v=LdSBgfL83H8

Comments

Leave a Reply

Your email address will not be published. Required fields are marked *