ಅಜರುದ್ದೀನ್ ಪುತ್ರನೊಂದಿಗೆ ಸಾನಿಯಾ ಮಿರ್ಜಾ ಸಹೋದರಿ ಮದುವೆ

ಹೈದರಾಬಾದ್: ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್‍ರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸದ್ಯ ಈ ಇಬ್ಬರು ಮದುವೆಯ ಸಿದ್ಧತೆಯಲ್ಲಿದ್ದು, ಡಿಸೆಂಬರ್ ನಲ್ಲಿ ಮದುವೆ ನಡೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅನಮ್ ಮಿರ್ಜಾ ಈ ಹಿಂದೆ ಅಕ್ಬರ್ ರಷಿದ್ ಎಂಬವರೊಂದಿಗೆ ವಿವಾಹವಾಗಿದ್ದರು. ಆದರೆ 2 ವರ್ಷದ ಬಳಿಕ ಇಬ್ಬರ ವಿವಾಹ ಸಂಬಂಧ ಮುರಿದು ಬಿದ್ದಿತ್ತು. ಆ ಬಳಿಕ ಅನಮ್, ಅಸಾದುದ್ದೀನ್ ರೊಂದಿಗೆ ಸುತ್ತಾಟ ನಡೆಸಿದ್ದರು. ಐಪಿಎಲ್ ಟೂರ್ನಿಯ ವೇಳೆ ಈ ಜೋಡಿ ಸಾನಿಯಾ ಮಿರ್ಜಾರೊಂದಿಗೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.

https://www.instagram.com/p/BunpFP1HfiW/?utm_source=ig_embed&utm_campaign=dlfix

ಸದ್ಯ ಸಹೋದರಿಯ ಮದುವೆ ಕುರಿತ ರೂಮರ್ ಗಳಿಗೆ ಸ್ಪಷ್ಟನೆ ನೀಡಿರುವ ಸಾನಿಯಾ ಮಿರ್ಜಾ, ಅನಮ್, ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್‍ರನ್ನು ಮದುವೆಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಗಂಡು ಮಗುವಿನ ತಾಯಿಯಾಗಿರುವ ಸಾನಿಯಾ ಮಿರ್ಜಾ ಈ ಹಿಂದೆ ಅಸಾದುದ್ದೀನ್ ರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ `ಫ್ಯಾಮಿಲಿ’ ಎಂದು ಬರೆದುಕೊಂಡಿದ್ದರು. ಈ ವೇಳೆಯೇ ಅನಮ್ ಮದುವೆ ಕುರಿತ ಸುದ್ದಿ ಕೇಳಿ ಬಂದಿತ್ತು.

25 ವರ್ಷದ ಸಾನಿಯಾ ಸಹೋದರಿ ಅನಮ್ ಶೂಟಿಂಗ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿ ಯಶಸ್ವಿ ಕಾಣದೇ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇತ್ತ 28 ವರ್ಷದ ಅಸಾದುದ್ದೀನ್ ಕೂಡ ತಂದೆಯಂತೆ ಕ್ರಿಕೆಟ್‍ನಲ್ಲಿ ಮಿಂಚಲು ಯತ್ನಿಸಿ ಸಾಕಷ್ಟು ಯಶಸ್ಸು ಲಭಿಸದೇ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ.

ಇತ್ತೀಚೆಗಷ್ಟೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸಾನಿಯಾ ಮಿರ್ಜಾ, ತನ್ನ ಚಿಕ್ಕಂದಿನಲ್ಲೇ ಟೆನ್ನಿಸ್ ಆಡದಂತೆ ಪೋಷಕರು ಹಾಗೂ ಸಂಬಂಧಿಗಳು ಹೇಳಿದ್ದರು. ಟೆನ್ನಿಸ್ ಆಡಿದರೆ ನೀನು ಕಪ್ಪಾಗಾಗುತ್ತಿಯಾ. ಆಗ ನಿನ್ನನ್ನನು ಮದುವೆಯಾಗಲು ಯಾರು ಬರುವುದಿಲ್ಲ ಎಂದು ಹೇಳುತ್ತಿದ್ದರು ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *