ಸಂಗೀತಾ ಯೋಗ್ಯತೆ ಬಗ್ಗೆ ಮಾತನಾಡಿದ ಕಾರ್ತಿಕ್‌ಗೆ ಕಿವಿಹಿಂಡಿದ ವಿನಯ್‌

ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಕಾರ್ತಿಕ್ (Karthik Mahesh) ಮತ್ತು ಸಂಗೀತಾ (Sangeetha Sringeri) ದೂರವಾಗಿ ಹಲವು ದಿನಗಳು ಕಳೆದಿದೆ. ಜೊತೆಯಾಗಿ ಶತ್ರುಗಳಿಗೆ ಠಕ್ಕರ್ ಕೊಡುತ್ತಿದ್ದ ಈ ಜೋಡಿ ದೂರ ದೂರ ಆಗಿದ್ದಾರೆ. ಇಬ್ಬರೂ ಶತ್ರುಗಳಾಗಿ ಜಗಳ ಆಡೋಕೆ ಟೊಂಕ ಕಟ್ಟಿ ನಿಂತಿದ್ದಾರೆ. ಇದೀಗ ಸಂಗೀತಾಗೆ ವುಮೆನ್ ಕಾರ್ಡ್ ಪ್ಲೇ ಮಾಡುತ್ತಿದ್ದೀಯಾ ಎಂದು ಕಾರ್ತಿಕ್ ಗುಡುಗಿದ್ದಾರೆ. ಇದನ್ನೂ ಓದಿ:ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಟಿಕೆಟ್ ಟು ಫಿನಾಲೆ ಟಾಸ್ಕ್ ಚಾಲ್ತಿಯಲ್ಲಿದೆ. ಇದರಲ್ಲಿ ಗೆದ್ದು ಅತೀ ಹೆಚ್ಚು ಪಾಯಿಂಟ್ ಗಳಿಸುವ ಒಬ್ಬ ಸ್ಪರ್ಧಿ ಮುಂದಿನ ವಾರದ ನಾಮಿನೇಷನ್‌ನಲ್ಲಿ ಸೇಫ್ ಆಗಲಿದ್ದಾರೆ. ಆ ಮೂಲಕ ಫಿನಾಲೆ ವಾರಕ್ಕೆ ನೇರವಾಗಿ ಕಾಲಿಡಲಿದ್ದಾರೆ. ಕಾರ್ತಿಕ್ ಪ್ರಬಲ ಸ್ಪರ್ಧಿ ಎಂಬ ಕಾರಣಕ್ಕೆ ಏನೋ, ಅವರನ್ನ ಟಾಸ್ಕ್‌ಗಳಿಗೆ ನಮ್ರತಾ(Namratha Gowda), ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಆಯ್ಕೆ ಮಾಡಿರಲಿಲ್ಲ.

ಕಾರ್ತಿಕ್ ಅವರನ್ನ ತನಿಷಾ (Tanisha) ಆಯ್ಕೆ ಮಾಡಿದ್ದರು. ಆದರೆ ಕಾರ್ತಿಕ್‌ನ ಹೊರದಬ್ಬಿ ಆ ಜಾಗಕ್ಕೆ ವರ್ತೂರು ಸಂತೋಷ್ ಬಂದರು. ಕಾರ್ತಿಕ್‌ಗೆ ವಿನಯ್ ಕೂಡ ಅವಕಾಶ ಕೊಟ್ಟಿದ್ದರು. ಆದರೆ, ಕಾರ್ತಿಕ್‌ನ ಸಂಗೀತಾ ಹೊರಗಿಟ್ಟು, ಆ ಜಾಗಕ್ಕೆ ಸಂಗೀತಾ ಬಂದು ಟಾಸ್ಕ್ ಆಡಿದರು.

ಕಾರ್ತಿಕ್ ಟಾಸ್ಕ್ ಆಡೋದು ತಮಗೆ ಇಷ್ಟವಿಲ್ಲ ಎಂದು ಸಂಗೀತಾ ಹೇಳಿದ್ದರು. ಇದರಿಂದ ಕಾರ್ತಿಕ್‌ಗೆ ಸಿಟ್ಟು ತರಿಸಿತ್ತು. ಆಟದ ವೇಳೆ ಸಂಗೀತಾಗೆ ಪೆಟ್ಟು ಬಿದ್ದಿತ್ತು. ಹೀಗಾಗಿ, ದಿ ಗರ್ಲ್ ಹು ಗೆಟ್ಸ್ ಇನ್ ಜುರ್ಡ್ ಇನ್ ಎವರಿಥಿಂಗ್ ಅಂತ ಸಂಗೀತಾ ಹೇಳಿದರು. ಆಗ, ವುಮನ್ ಕಾರ್ಡ್ ಎಂದರು ಕಾರ್ತಿಕ್. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ನಿಮ್ಮ ವ್ಯಕ್ತಿತ್ವ ಏನು ತೋರಿಸುತ್ತದೆ ಎಂದು ಸಂಗೀತಾ ಹೇಳಿದಾಗ ರೊಚ್ಚಿಗೆದ್ದ ಕಾರ್ತಿಕ್, ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡುವ ಯೋಗ್ಯತೆ, ಅರ್ಹತೆ ನಿನಗೆ ಇಲ್ಲ ಎಂದು ಗುಡುಗಿದ್ದರು.

ಇಬ್ಬರ ಜಗಳದ ಮಧ್ಯೆ ವಿನಯ್ ಬೆಳೆ ಬೆಳೆಯಿಸುವ ಕೆಲಸ ಮಾಡಿದ್ದಾರೆ. ನನಗೆ ಎಲ್ಲರೂ ಕೆಟ್ಟ ಪದ ಉಪಯೋಗಸಬೇಡ ಅಂತ ಹೇಳ್ತೀರಾ ಈಗ ನೀವೇನು ಮಾಡ್ತಿದ್ದೀರಾ? ಯೋಗ್ಯತೆ ಬಗ್ಗೆ ಯಾಕೆ ಮಾತನಾಡಿದೆ ಎಂದು ಸಂಗೀತಾ ಪರ ವಿನಯ್ ಬ್ಯಾಟ್ ಬೀಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಂದು ಸಮಯದಲ್ಲಿ ಹಾವು ಮತ್ತು ಮುಂಗುಸಿಯಂತೆ ವಿನಯ್ ಮತ್ತು ಸಂಗೀತಾ ಕಿತ್ತಾಡುತ್ತಿದ್ದರು. ಈಗ ಇಬ್ಬರೂ ಒಂದಾಗಿರೋದು ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.