ಸ್ಯಾಂಡಲ್‍ವುಡ್ ಮಾದನ ಬಾಳಲ್ಲಿ ಮದುವೆಯ ಸಾಹಿತ್ಯ-ದಂಪತಿಯಾದ ಬಾಲ್ಯದ ಸ್ನೇಹಿತರು

ಬೆಂಗಳೂರು: ಸ್ಯಾಂಡಲ್‍ವುಡ್ ನ ಯಂಗ್ ಸ್ಟಾರ್ ಯೋಗಿ ಮದುವೆ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಶ್ರೀ ಕನ್ವೆಂಷನ್ ಹಾಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ಯೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಳಗ್ಗೆ 6 ಗಂಟೆಯೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಯೋಗಿ, ಬಾಲ್ಯದ ಗೆಳತಿ ಸಾಹಿತ್ಯಗೆ ತಾಳಿ ಕಟ್ಟಿದರು. ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರ ಈ ಕಲ್ಯಾಣ ಕಾರ್ಯ ನೆರವೇರಿತು. ಮಧುಮಗ ಯೋಗಿ ಬಿಳಿ ಧಿರಿಸಿನಲ್ಲಿ, ವಧು ಸಾಹಿತ್ಯ ಜರತಾರಿ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ವಧುವರನ ಬಂಧು ಬಳಗ, ಯೋಗಿಯ ಆಪ್ತರಷ್ಟೇ ಪಾಲ್ಗೊಂಡಿದ್ದಾರೆ.

ಇಂದು ಸಂಜೆ 7 ಗಂಟೆಯಿಂದ ಇದೇ ಕನ್ವೆನ್ಷನ್ ಹಾಲ್‍ನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ನಡೆಯಲಿದೆ. ಆರತಕ್ಷತೆ ಸಮಾರಂಭದಲ್ಲಿ ಸಿನಿಮಾ ಲೋಕದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಸಾಹಿತ್ಯ ಮತ್ತು ಯೋಗಿ ಸಹಪಾಠಿಗಳಾಗಿದ್ದರು. ನಂತರ ಯೋಗಿ ಸಿನಿಮಾ ರಂಗಕ್ಕೆ ಕಾಲಿಟ್ಟಮೇಲೂ ಸಾಹಿತ್ಯರೊಂದಿಗೆ ಸ್ನೇಹವಿತ್ತು. ಕೆಲವು ವರ್ಷಗಳ ಹಿಂದೆ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಸತಿಪತಿಯಾಗಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಈ ಮದುವೆ ನೆರವೇರಿದೆ.

Comments

Leave a Reply

Your email address will not be published. Required fields are marked *