ಹೆಂಡತಿ, ಮೊಮ್ಮಗನ ಮುತ್ತಿಗೆ ಉಬ್ಬಿಹೋದ ಜಗ್ಗೇಶ್

ಚಂದನವನದ ನವರಸ ನಾಯಕ, ಭಿನ್ನವಾಗಿ ಕಾಮಿಡಿ ಮಾಡುವ ಮೂಲಕ ಕನ್ನಡಿಗರ ಮನಗೆದ್ದ ಜಗ್ಗೇಶ್ ಮಾಚ್ 17ಕ್ಕೆ 59ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹುಟ್ಟುಹಬ್ಬದ ದಿನ ಬೆಳಗ್ಗೆಯೇ ರಾಯರ ದರ್ಶನ ಪಡೆದ ಜಗ್ಗೇಶ್, ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲಕಳೆದಿದ್ದಾರೆ. ಈ ವೇಳೆ ತಮ್ಮ ಮುದ್ದು ಕುಟುಂಬದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸನ್ನೆಯ ಮೂಲಕವೇ ಕಾಮಿಡಿ ಮಾಡಿ ಜನರ ಹೃದಯ ಗೆದ್ದ ಜಗ್ಗೇಶ್ ಇನ್ಸ್ಟಾಗ್ರಾಮ್‌ನಲ್ಲಿ, ನನ್ನ ಪುಟ್ಟ ಸಂಸಾರ. ನನಗಾಗಿ ಕಾದುಕುಳಿತು, ತಮ್ಮ ಅಮೂಲ್ಯ ಪ್ರೀತಿ ಹಂಚಿದರು. ಅಜ್ಜಿ, ಮೊಮ್ಮಗ ಸಿಹಿ ಮುತ್ತಿಗೆ ತಾತ ಉಬ್ಬಿಹೋದ ಎಂದು ತಮ್ಮ ವಿಶೇಷ ದಿನದಲ್ಲಿ ಸಿಕ್ಕ ಅಪರೂಪದ ಉಡುಗೊರೆಯನ್ನು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

ಅಷ್ಟೇ ಅಲ್ಲದೇ, ಏನೇ ಗಳಿಸಿದರು ಜಗದಲ್ಲಿ ಶ್ರೇಷ್ಠ ಪ್ರೀತಿ ಮಾತ್ರ. ನನ್ನನ್ನು ಪ್ರೀತಿಯಿಂದ ಹರಸಿದ ಆತ್ಮೀಯ ಕನ್ನಡದ ಹೃದಯಗಳಿಗೆ ವಂದನೆ ಅಭಿನಂದನೆ ಎಂದು ಬರೆದು ಫ್ಯಾಮಿಲಿ ಜೊತೆಗೆ ಕುಳಿತುಕೊಂಡ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಫೋಟೋದಲ್ಲಿ ಜಗ್ಗೇಶ್ ತನ್ನ ಇಬ್ಬರು ಮಕ್ಕಳು, ಸೊಸೆ, ಮೊಮ್ಮಗ ಮತ್ತು ಪತ್ನಿ ಜೊತೆ ಕುಳಿತುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಫೋಟೋ ಶೇರ್ ಮಾಡುವ ಮೂಲಕ ಫ್ಯಾಮಿಲಿ ಅವರಿಗೆ ಕೊಟ್ಟ ಮಹತ್ವದ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ಅದಕ್ಕೆ ಈ ಫೋಟೋಗಳೇ ಉದಾಹರಣೆ. ಇದನ್ನೂ ಓದಿ:  ರಾಯರ ಆಶೀರ್ವಾದ ಪಡೆದ ಜಗ್ಗೇಶ್

Comments

Leave a Reply

Your email address will not be published. Required fields are marked *