ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್‍ಗೆ ಬರ್ತ್ ಡೇ ಸಂಭ್ರಮ- ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ KGF ಟೀಸರ್ ರಿಲೀಸ್

ಬೆಂಗಳೂರು: ಅಭಿಮಾನಿಗಳ ಮೊಗ್ಗಿನ ಮನಸ್ಸಿನ ಪ್ರೀತಿಯ ನಾಯಕ. ಉತ್ತಮ ಕೆಲಸ ಮಾಡುವ ಸಮಾಜ ಸೇವಕ. ಕಷ್ಟಪಟ್ಟು ಇಂಡಸ್ಟ್ರೀಯಲ್ಲಿ ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಸಿನಿ ಪ್ರೇಕ್ಷಕರ ಆರಾಧಕ, ರಾಕಿಂಗ್ ಸ್ಟಾರ್ ಯಶ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಗಾಂಧಿನಗರದ ಪಾಲಿನ ಲಕ್ಕಿ ಸ್ಟಾರ್. ಅಭಿಮಾನಿಗಳ ಪಾಲಿನ ಪ್ರೀತಿಯ ರಾಕಿಂಗ್ ಸ್ಟಾರ್. ಯಶೋಮಾರ್ಗದ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ಯಶಸ್ಸನ್ನುಗಳಿಸಿಕೊಂಡ ಜನಸೇವಕ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ನೆಚ್ಚಿನ ನಟನ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳು ಏನು ಕಮ್ಮಿ ಇರಲಿಲ್ಲ. ಈ ದಿನಕ್ಕೋಸ್ಕರ ಕಾದು ಕುಳಿತಿದ್ದ ಯಶ್ ಫ್ಯಾನ್ಸ್. ಭಾನುವಾರ ಸಂಜೆಯಿಂದಲ್ಲೇ ಕತ್ರಿಗುಪ್ಪೆ ನಿವಾಸದ ಬಳಿ ಜಮಾಯಿಸಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ಯಶ್‍ರನ್ನು ನೋಡಿ ಪ್ರೀತಿಯಿಂದ ವಿಶ್ ಮಾಡಿ, ಕೇಕ್ ಕತ್ತರಿಸಿ ಖುಷಿಪಟ್ಟರು.

ಅಭಿಮಾನಿಗಳ ಅಭಿಮಾನದ ಜಾತ್ರೆ ನಡುವೆ, ಪ್ರೀತಿಯಿಂದ ಅಭಿಮಾನಿಗಳು ತಂದಿದ್ದ ಕೇಕ್‍ನ್ನು ಯಶ್ ಕಟ್ ಮಾಡಿದ್ದರು. ಅಷ್ಟೇ ಅಲ್ಲ ಸೆಲ್ಫಿಗೂ ಫೋಸ್ ಕೊಟ್ಟರು. ಸದ್ಯ ಪೋಸ್ಟರ್ ಮತ್ತು ಫೋಟೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಕೆ.ಜಿ.ಎಫ್ ಸಿನಿಮಾ ಬಿಡುಗಡೆಯನ್ನ ಯಶ್ ಎದುರು ನೋಡುತ್ತಿದ್ದಾರೆ.

ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಯಶ್ ಗೆ ಬರ್ತ್ ಡೇ ಗಿಫ್ಟ್ ಆಗಿ ಕೆಜಿಎಫ್ ಟೀಂ ಟೀಸರ್ ರೀಲಿಸ್ ಮಾಡಿದೆ. ಗಡ್ಡ ಬಿಟ್ಟು ಖೈದಿಯ ಲುಕ್ ನಲ್ಲಿ ಯಶ್ ಕಮಾಲ್ ಮಾಡುತ್ತಿದ್ದಾರೆ. ಅದೇನೆ ಇದ್ದರೂ ಹುಟ್ಟುಹಬ್ಬದ ಖುಷಿಯಲ್ಲಿರುವ ಯಶ್ ಮತ್ತು ಯಶ್ ಫ್ಯಾನ್ಸ್ ಮುಖದಲ್ಲಿನ ಮಂದಹಾಸ, ಸದಾ ಕಾಲ ಹೀಗೆ ಇರಲಿ ಎನ್ನುವುದು ಎಲ್ಲರ ಆಶಯ.

Comments

Leave a Reply

Your email address will not be published. Required fields are marked *