ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

– ಸಲಗ, ಕೋಟಿಗೊಬ್ಬ3 ನಡುವೆ ಪೈಟ್

ಬೆಂಗಳೂರು: ಚಂದನವನದಲ್ಲಿ ಈಗ ಸ್ಟಾರ್‌ವಾರ್‌ ಶುರುವಾಗಿದೆ. ಒಂದೇ ದಿನ ತೆರೆ ಮೇಲೆ ಬರಲು ಬಿಗ್ ಬಜೆಟ್ ಸಿನಿಮಾಗಳಾದ ಸಲಗ, ಕೋಟಿಗೊಬ್ಬ-3 ಬಿಡುಗಡೆ ಸಿದ್ಧವಾಗಿದೆ.

ದಸಾರ ಹಬ್ಬದ ದಿನ ಸಲಗ ಸವಾರಿ ಆರಂಭವಾಗಲಿದೆ. ದುನಿಯ ವಿಜಿ ನಿರ್ದೇಶಿಸಿ ನಟಿಸಿರುವ ಸಲಗ ಆ.14ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದೇ ದಿನ ತೆರೆಗೆ ಬರೋದು ಪಕ್ಕಾ ಅಂತಿದೆ ಸುದೀಪ್ ನಟನೆಯ ಸೂರಪ್ಪ ಬಾಬು ನಿರ್ಮಾಣದ ಚಿತ್ರ ಕೋಟಿಗೊಬ್ಬ 3 ಸಿನಿಮಾ. ವಿಜಯ ದಶಮಿಯಂದು ವಿಜಯದ ಮಾಲೆ ಯಾರಿಗೆ ಹಾಕಲಿದ್ದಾರೆ ಸಿನಿ ಪ್ರೇಕ್ಷಕರು ಎಂಬುದನ್ನು ಕಾದುನೋಡಬೇಕಾಗಿದೆ.

ಇದು  ಸ್ಟಾರ್‌ವಾರ್‌ ಅಲ್ಲ, ಇಬ್ಬರೂ ಒಟ್ಟಿಗೆ ಬರ್ತಿದ್ದೀವಿ ಅಷ್ಟೇ. ಎರಡೂ ಸಿನಿಮಾಗಳಿಗೂ ಕನ್ನಡಿಗರು ಆರ್ಶೀವಾದ ಮಾಡುತ್ತಾರೆ. ಎರಡೂ ಸಿನಿಮಾಗಳ ನಿರ್ಮಾಪಕರ ನಡುವೆ ಸಮಸ್ಯೆ ಇಲ್ಲ. ಒಟ್ಟಿಗೆ ರಿಲೀಸ್ ಆಗ್ತಿರುವುದರಿಂದ ಎಲ್ಲಾ ಕಡೆ ಕನ್ನಡ ಸಿನಿಮಾಗಳು ನೋಡಲು ಸಿಗುತ್ತದೆ. ಪರಭಾಷ ಸಿನಿಮಾಗಳ ಸಮಸ್ಯೆಗೆ ಅವಕಾಶ ಇರೋದಿಲ್ಲ ಎಂದು ಪಬ್ಲಿಕ್ ಟಿವಿಗೆ ಸಲಗ ನಿರ್ಮಾಪಕ ಕೆ ಪಿ ಶ್ರೀಕಾಂತ್ ಹೇಳಿದ್ದಾರೆ. ಇದನ್ನೂ ಓದಿ:  ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

ನಮಗೊಂದು ಒಳ್ಳೆಯ ದಿನ ಸಿಕ್ಕಿದೆ. ದಸರಾ ಹಬ್ಬ, ಚಾಮುಂಡೇಶ್ವರಿ ದಯೆ ಎಲ್ಲವೂ ಇದೆ ಎಂದು ಪಬ್ಲಿಕ್ ಟಿವಿಗೆ ನಟ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 14ರಂದೇ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಲಿದೆ. ಮಾತುಕತೆ ಆಡಿದ್ದು ನಿಜ, ಶ್ರೀಕಾಂತ್ ಅವರದ್ದು ತಪ್ಪಿಲ್ಲ. ಅಕ್ಟೋಬರ್ 1, 14, 29 ಅಂತ ಇತ್ತು. ಅಕ್ಟೋಬರ್ 14ರಂದು ಬಿಟ್ಟುಕೊಡಲು ರೆಡಿ ಇದ್ದೇನೆ ಎಂದು ಹೇಳಿದ್ದೇನೆ. ಅಕ್ಟೋಬರ್ 29ರಂದು ಡೇಟ್ ಸಿಗೋದಾದರೆ ಬಿಟ್ಟುಕೊಡಲು ಒಪ್ಪಿದೆ. ಆದರೆ ಅಕ್ಟೋಬರ್ 29ರಂದು ಜಯಣ್ಣ ಅವರು ಭಜರಂಗಿ-2 ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *