ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಭಿಷೇಕ್ ಶೆಟ್ಟಿ

‘ಆರಾಮ್ ಅರವಿಂದ ಸ್ವಾಮಿ’ ಡೈರೆಕ್ಟರ್ ಅಭಿಷೇಕ್ ಶೆಟ್ಟಿ (Abhishek Shetty) ಅವರು ಸಾಕ್ಷಾ ಶೆಟ್ಟಿ (Saksha Shetty) ಇಂದು (ನ.28) ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡು, ನಮ್ಮನ್ನು ಹಾರೈಸಿ ಎಂದು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಟೀಸರ್ ಅಲ್ಲ, ಟ್ರೈಲರ್ ಅಲ್ಲ; ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್

ನವಜೋಡಿ ಅಭಿಷೇಕ್ ಮತ್ತು ಸಾಕ್ಷಾ ಶೆಟ್ಟಿ ಗೋಲ್ಡನ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಕೆಲಸದ ಒತ್ತಡದಿಂದಾಗಿ ಎಲ್ಲರನ್ನೂ ಕರೆಯೋಕೆ ಆಗಿಲ್ಲ ಎಂದಿನಂತೆ ಪ್ರೀತಿ ಆಶೀರ್ವಾದ ಇರಲಿ ಎಂದು ಅಭಿಷೇಕ್ ಶೆಟ್ಟಿ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಾಕ್ಷಾ ಜೊತೆ ಅಭಿಷೇಕ್ ಜೊತೆ ಕುಂದಾಪುರದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನಟನಿಗೆ ಅಭಿಮಾನಿಗಳು ಇದೀಗ ಶುಭಹಾರೈಸುತ್ತಿದ್ದಾರೆ.

ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಟನೆಯ ಜೊತೆ ನಿರ್ದೇಶಕನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನೀಶ್- ಮಿಲನಾ ನಟಿಸಿದರು.