ಟೈಗರ್ ಶ್ರಾಫ್‌ಗೆ ‘ಭಜರಂಗಿ’ ಹರ್ಷ ಆ್ಯಕ್ಷನ್ ಕಟ್- ಪೋಸ್ಟರ್ ಔಟ್

‘ಭಜರಂಗಿ’ (Bhajarangi) ಖ್ಯಾತಿಯ ನಿರ್ದೇಶಕ ಎ.ಹರ್ಷ (A.Harsha) ಅವರು ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಪ್ರತಿಭಾನ್ವಿತ ನಟ ಟೈಗರ್ ಶ್ರಾಫ್‌ಗೆ ಎ.ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ನಟನ ಖಡಕ್ ಆಗಿರುವ ಪೋಸ್ಟರ್‌ವೊಂದನ್ನು ರಿಲೀಸ್ ಮಾಡಿ ಮೊದಲ ಬಾಲಿವುಡ್ ಸಿನಿಮಾದ ಬಗ್ಗೆ ಎ.ಹರ್ಷ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

ಟೈಗರ್ ಶ್ರಾಫ್ (Tiger Shroff) ನಟನೆಯ ‘ಬಾಘಿ 4’ಗೆ (Baaghi 4) ಎ.ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಟೈಗರ್ ಶ್ರಾಫ್ ಅವರು ಸ್ಮೋಕ್ ಮಾಡುತ್ತಾ ಒಂದು ಕೈಯಲ್ಲಿ ಲಾಂಗ್ ಹಿಡಿದ್ದಾರೆ. ಮತ್ತೊಂದು ಕೈಯಲ್ಲಿ ಮದ್ಯಪಾನ ಬಾಟಲಿ ಹಿಡಿದು ರಕ್ತಸಿಕ್ತ ಅವತಾರದಲ್ಲಿ ನಟ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಸೆ.5ರಂದು ಸಿನಿಮಾ ರಿಲೀಸ್‌ ಆಗಲಿದೆ.

 

View this post on Instagram

 

A post shared by A Harsha (@nimmaaharsha)

ಅಂದಹಾಗೆ, ಬಿರುಗಾಳಿ, ಚಿಂಗಾರಿ ಸಿನಿಮಾ ನಂತರ ವಜ್ರಕಾಯ, ಭಜರಂಗಿ, ಭಜರಂಗಿ 2, ವೇದ ಸಿನಿಮಾಗಳ ಮೂಲಕ ಎ.ಹರ್ಷ ಸಕ್ಸಸ್ ಕಂಡರು.