ಜನವರಿ 24ಕ್ಕೆ ‘ಖಾಕಿ’ ದರ್ಶನ!

ನಟ ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಜೊತೆ ತಾನ್ಯಾ ಹೋಪ್ ನಟಿಸಿರುವ ‘ಖಾಕಿ’ ಸಿನಿಮಾ ಪಕ್ಕಾ ಕಮರ್ಷಿಯಲ್ ಕತೆಯನ್ನು ಹೊಂದಿರುವ ಆ್ಯಕ್ಷನ್ ಸಿನಿಮಾ. ಇದೆ 24ರಂದು ಸಿನಿಮಾ ಎಲ್ಲಾ ಚಿತ್ರಮಂದಿರಗಳಲ್ಲೂ ತನ್ನ ಪ್ರದರ್ಶನ ನೀಡಲು ರೆಡಿಯಾಗಿದೆ.

‘ಸಿಂಗ’ ಸಿನಿಮಾ ನಂತರ ಮತ್ತೊಮ್ಮೆ ಆ್ಯಕ್ಷನ್ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದಾರೆ. ‘ಖಾಕಿ’ಯಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿರುವ ಚಿರು ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಹಾಡುಗಳು, ಟ್ರೇಲರ್ ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು, ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

‘ಖಾಕಿ’ ಹಾಕದೆಯೆ ಈ ಸಿನಿಮಾದಲ್ಲಿ ಅಬ್ಬರಿಸಲಿರುವ ಚಿರುಗೆ, ಮಗಧೀರ ಸಿನಿಮಾದಲ್ಲಿ ಕಾಲಭೈರವ ರಾಮ್‍ಚರಣ್ ಎದುರು ಅಬ್ಬರಿಸಿದ್ದ ರಣದೇವ್ ಬಿಲ್ಲಾ, ದೇವ್ಗಿಲ್ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿರು ಮತ್ತು ದೇವ್ಗಿಲ್ ನಡುವಿನ ಪೈಪೋಟಿ ಪ್ರೇಕ್ಷಕರಿಗೆ ಸಖತ್ ಮಜಾ ಕೊಡಲಿದೆ. ಪಂಚಿಂಗ್ ಡೈಲಾಗ್ಸ್, ಜಬರ್ದಸ್ತ್ ಆ್ಯಕ್ಷನ್ ಝಲಕ್ ಅನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಚಿರಂಜಿವಿ ಸರ್ಜಾ ಅವರನ್ನು ಮಾಸ್ ಲುಕ್ ನಲ್ಲಿ ನೋಡಲು ಅಭಿಮಾನಿಗಳಂತು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಸಿನಿಮಾ ಕೂಡ ಚಿರಂಜೀವಿ ಸರ್ಜಾಗೆ ಒಂದೊಳ್ಳೆ ಫೇಮ್ ತಂದು ಕೊಡುವ ನಿರೀಕ್ಷೆ ಬೆಟ್ಟದಷ್ಟಿದೆ.

‘ಖಾಕಿ’ ಕಥೆ, ಚಿತ್ರಕಥೆ ಬರೆದು ನವೀನ್ ರೆಡ್ಡಿ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಸಂಗೀತ ನೀಡಿದ್ದು, ಬಾಲಾ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಧನು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿರಂಜೀವಿ ಸರ್ಜಾ, ತಾನ್ಯ ಹೋಪ್ ಮುಖ್ಯಭೂಮಿಕೆಯಲ್ಲಿದ್ದು, ದೇವ್ ಗಿಲ್, ಶಿವಮಣಿ, ಶಶಿ, ನವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *