ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್‌ನಲ್ಲಿ ಕೌಂಟರ್ ಕೊಟ್ಟಿದ್ದಾರೆ. ಆದರೆ ಅದು ಯಾರಿಗೆ ಎನ್ನುವುದನ್ನು ಡಿ ಬಾಸ್ ತಿಳಿಸಿಲ್ಲ.
ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ನಾನು ಐಸ್‍ಕ್ಯಾಂಡಿಯಷ್ಟು ಸಿಹಿ. ನೀರಿನಷ್ಟು ತಂಪು, ಕೆಟ್ಟತನದಲ್ಲಿ ನರಕ ತೋರಿಸುತ್ತೇನೆ. ಪ್ರಾಮಾಣಿಕತೆಯಲ್ಲಿ ಯೋಧನಷ್ಟು ನಿಷ್ಠ. ಎದುರಿಗೆ ಇದ್ದವರು ಹೇಗಿರುತ್ತಾರೊ, ನಾನೂ ಹಾಗೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.
— Darshan Thoogudeepa (@dasadarshan) August 31, 2019
ಡಿಬಾಸ್ ಈ ಪಂಚಿಂಗ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲ ಅಭಿಮಾನಿಗಳು ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಸಿನಿಮಾ ಪ್ರಿಯರು ತಮ್ಮ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಬಾಸ್. ಈ ಹೇಳಿಕೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತ್ತಿದೆ. ಆದರೆ ಅಭಿಮಾನಿಗಳು ಇದನ್ನು ಮತ್ತೊಂದು ಆಯಾಮದಲ್ಲಿ ನೋಡುವುದು ಬೇಡ ಎಂದು ನಿಶಾ ದರ್ಶ ವಿಜಿ ಎಂಬವರು ರಿಟ್ವೀಟ್ ಮಾಡಿದ್ದಾರೆ.
https://twitter.com/Nish_Darsh_Vijz/status/1167743721628004357

Leave a Reply