ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸಾಮಾಜಿಕ ಕಳಕಳಿಯುತವಾದ ಅವರ ಕೆಲವು ವಿಚಾರಧಾರೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇವರು ಇಂದು ಹೇಳಿರುವ ವಿಚಾರ ತುಂಬಾ ಗಂಭೀರ ಮತ್ತು ಜಾಗೃತಿಯನ್ನು ಮೂಡಿಸುತ್ತಿದೆ.

ಮಹಿಳೆಯ ಮೇಲೆ ಪುರುಷನು ಮಾಡುವ ಪ್ರತಿಯೊಂದು ಅಪರಾಧಕ್ಕೂ ನಾವು ಯಾವಾಗಲೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತೇವೆ. ಅದು ಅತ್ಯಾಚಾರವಾಗಲಿ ಅಥವಾ ಆತ ನಿಮ್ಮನ್ನು ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂದಿಸುತ್ತಿರಲಿ. ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು ಅಂತ ಹೇಳುತ್ತಾರೆ.

 

View this post on Instagram

 

A post shared by Ramya/Divya Spandana (@divyaspandana)

ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿ, ತುಂಬಾ ಆಕರ್ಷಕವಾಗಿ, ತುಂಬಾ ಉದ್ದವಾಗಿ ಧರಿಸಬಾರದು ಅಂತಾರೆ. ತಡವಾಗಿ ಹೊರಗೆ ಹೋದ್ರೆ, ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಏಕೆ ಕೆಂಪು ಲಿಪ್‌ ಸ್ಟಿಕ್, ಏಕೆ ಕಲರ್ ಫುಲ್, ನೀವು ಕಣ್ಣು ಮಿಟುಕಿಸಬಾರದಿತ್ತು ಅಂತಾರೆ. ನಿಮಗೆ ಇದು ಇರಬಾರದು, ಅದು ಇರಬಾರದು ಎಂದು ಏಕೆ ಹೇಳುತ್ತಾರೆ. ಏಕೆಂದರೆ ಪುರುಷರು ಪುರುಷರಾಗುತ್ತಾರೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕಾ? ಇಲ್ಲ ಇಲ್ಲ ಈ ಅಸಂಬದ್ಧತೆಗೆ ಪೂರ್ಣವಿರಾಮ ಹಾಕಬೇಕು ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ ಮಾತನಾಡಿ ಎಂದು ಬರೆದು ಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಫೋಟೋವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ:  ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

ಸಿನಿಮಾ, ರಾಜಕೀಯದಿಂದ ದೂರ ಇರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ರಮ್ಯಾ ಅವರು ತಮ್ಮ ಕೆಲವು ವಿಚಾರ, ಅನಿಸಿಕೆ, ಜಾಗೃತಿ, ಸಾಮಾಜಿಕ ಕಳಕಳಿಯ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬರೆದುಕೊಳ್ಳುತ್ತಿರುತ್ತಾರೆ. ಇದೀಗ ಮಹಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿ ಧ್ವನಿಯನ್ನು ಎತ್ತಿದ್ದಾರೆ.

Comments

Leave a Reply

Your email address will not be published. Required fields are marked *