ಮೈಸೂರು: ಸ್ಯಾಂಡಲ್‍ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕುಟುಂಬದ ಸದಸ್ಯರು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ.
ಶುಕ್ರವಾರ ದಸರಾ ವೀಕ್ಷಣೆಗೆ ಮೈಸೂರಿಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಇಂದು ಶಕ್ತಿಧಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ಜೊತೆಗೆ ಅವರ ಕುಟುಂಬದ ಸದಸ್ಯರಾದ ಪತ್ನಿ ಗೀತಾ ಅವರು ಮತ್ತು ಮಗಳು ಹಾಗೂ ಸಿನಿಮಾದ ಸದಸ್ಯರು ಕೂಡ ಹೋಗಿದ್ದರು.

ಹಬ್ಬದ ಪ್ರಯುಕ್ತ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಶಕ್ತಿಧಾಮಕ್ಕೆ ತೆರಳಿ ಮಕ್ಕಳಿಗೆ ಸಿಹಿ ಹಂಚಿ ಜೊತೆಯಲ್ಲಿ ಸಮಯ ಕಳೆದರು. ಅಷ್ಟೇ ಅಲ್ಲದೇ ನಿರ್ದೇಶಕರಾದ ರಘು ರಾಮ್ ಅವರು ಕೂಡ ಜೊತೆಗೆ ಹೋಗಿದ್ದು, ಅವರು ಮಕ್ಕಳಿಗೆ ಕಥೆಗಳು ಪದ್ಯಗಳನ್ನು ಹೇಳಿಕೊಡುವ ಮೂಲಕ ಅವರೊಂದಿಗೆ ಸಿಹಿ ಕ್ಷಣಗಳನ್ನು ಕಳೆದಿದ್ದಾರೆ.
ಶುಕ್ರವಾರ ನಡೆದ ಜಂಬೂ ಸವಾರಿ ವೀಕ್ಷಿಸಲು ಶಿವಣ್ಣ ಹಾಗೂ ಅವರ ಕುಟುಂಬ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಹೈವೇ ವೃತ್ತದ ಬಳಿ ರಸ್ತೆ ಬದಿ ಖಾಸಗಿ ಹೋಟೆಲ್ ಒಂದರ ಮುಂಭಾಗ ರಸ್ತೆ ಬದಿ ಚೇರ್‍ನಲ್ಲಿ ಶಿವರಾಜ್‍ಕುಮಾರ್ ದಂಪತಿ ಹಾಗೂ ರಘು ರಾಮ್ ಅವರ ಕುಟುಂಬಸ್ಥರು ಕುಳಿತು ವೀಕ್ಷಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply