ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾಗೆ ಮತ್ತೊಂದು ಗರಿ- ಜಪಾನ್‌ನತ್ತ ‘777 ಚಾರ್ಲಿ’

ಸ್ಯಾಂಡಲ್‌ವುಡ್ (Sandalwood) ನಟ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಚಿತ್ರದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಕ್ಷಿತ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮತ್ತೆ ಸುದ್ದಿಯಲ್ಲಿದೆ. ಜಪಾನ್‌ನಲ್ಲಿ ಕನ್ನಡದ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನೂ ಓದಿ:ಪರಭಾಷೆಯಲ್ಲಿ ಕನ್ನಡತಿ ರುಕ್ಮಿಣಿ ವಸಂತ್‌ಗೆ ಭಾರೀ ಬೇಡಿಕೆ

ಇದೇ ಜೂನ್ 28ರಂದು ‘777 ಚಾರ್ಲಿ’ (777 Charlie) ಸಿನಿಮಾ ಜಪಾನ್‌ನ ಹಲವು ನಗರಗಳಲ್ಲಿ ರಿಲೀಸ್ ಆಗುತ್ತಿದೆ. 2 ವರ್ಷಗಳ ನಂತರವೂ ಈ ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. ಅಂದಹಾಗೆ, ಜಪಾನ್ ಪ್ರತಿಷ್ಠಿತ ಸಂಸ್ಥೆಯಾದ ‘ಶೋಚಿಕೋ ಮೂವಿ’ ರಕ್ಷಿತ್ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ.

2023ರಲ್ಲಿ ‘777 ಚಾರ್ಲಿ’ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2022ರಲ್ಲಿ ‘777 ಚಾರ್ಲಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ರಕ್ಷಿತ್ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟಿಸಿದ್ದರು. ಚಾರ್ಲಿ ಸುತ್ತನೇ ಸುತ್ತುವ ಕಥೆಯಾಗಿದ್ರಿಂದ ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಿತ್ತು. ಇದೀಗ ಜಪಾನ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ರೆಡಿಯಾಗಿದ್ದಾರೆ.