ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

ಕೆಲ ಗಂಟೆಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ, ‘ಹಿಂದಿ ರಾಷ್ಟ್ರ ಭಾಷೆ ಅಲ್ಲದೇ ಇದ್ದರೆ, ಹಿಂದಿ ಭಾಷೆಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ರಿಲೀಸ್ ಮಾಡುತ್ತೀರಿ?’ ಎಂದು ನೇರವಾಗಿ ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆ ಮಾಡಿದ್ದರು. ನಮಗೆ ಹಿಂದಿ ರಾಷ್ಟ್ರ ಭಾಷೆ ಮತ್ತು ಮಾತೃ ಭಾಷೆ ಎಂದು ಹೇಳಿಕೊಂಡಿದ್ದರು. ಈ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

ಅಜಯ್ ದೇವಗನ್  ಮಾಡಿದ್ದ ಟ್ವೀಟ್ ಗೆ ಉತ್ತರ ನೀಡಿರುವ ಸುದೀಪ್, ‘ನಾನು ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುವೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯ. ಮಚ್ ಲವ್. ಶೀಘ್ರದಲ್ಲೇ ನಿಮ್ಮನ್ನು ಕಾಣುವೆ. ಶುಭಾಶಯಗಳು’ ಎಂದು ಒಂದು ರೀಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ವಿಷಾದದ ಅರ್ಥದಲ್ಲಿಯೂ ಬರೆದಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್.  

ಈ ವಿಷಯವಾಗಿ ಮೂರನೇ ಟ್ವೀಟ್ ಮಾಡಿರುವ ಸುದೀಪ್, ನೀವು ಹಿಂದಿಯಲ್ಲೇ ಕಳುಹಿಸಿದ ಟೆಕ್ಸ್ಸ್ಟ್ ಅರ್ಥವಾಯಿತು. ನಾವೆಲ್ಲರೂ ಹಿಂದಿಯನ್ನು ಗೌರವಸಿದ್ದೇವೆ ಮತ್ತು ಪ್ರೀತಿಸುತ್ತೇವೆ. ನನ್ನ ಉತ್ತರವನ್ನು ಕನ್ನಡದಲ್ಲೇ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಅಚ್ಚರಿ ಪಡುತ್ತಿದ್ದೇನೆ. ನಾವೆಲ್ಲರೂ ಭಾರತಕ್ಕೆ ಸೇರಿದವರು ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *