ರಾಯರ ಆಶೀರ್ವಾದ ಪಡೆದ ಜಗ್ಗೇಶ್

ಬೆಂಗಳೂರು: ಇಂದು ನವರಸ ನಟ ಜಗ್ಗೇಶ್ 59ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ನಾನು ಈ ಜನ್ಮ ಮಾತಾಪಿತೃ ಕುಲದೇವರ ಕೃಪೆಯಿಂದ ಭೂಮಿಯಲ್ಲಿ ಪಡೆದು ಇಂದಿಗೆ 59 ವರ್ಷಗಳಾಗಿದೆ. ಇಂದು ಕೋಟ್ಯಂತರ ಕನ್ನಡದ ಮನಗಳ ಆಶೀರ್ವಾದ ಪಡೆದ ಮಗನಾಗಿರುವೆ. ರಾಯರ ಕೃಪೆಯಿಂದ ನಿಮ್ಮ ಪ್ರೀತಿ ಕೊನೆ ಉಸಿರಿನವರೆಗು ಉಳಿಸಿಕೊಳ್ಳುವೆ. ಇಂದು ರಾಯರ ಮುಂದೆ ನಿಂತು ಆಶೀರ್ವಾದ ಪಡೆದೆ. ಬದುಕು ಸಾರ್ಥಕ ಎನಿಸಿತು. ನನ್ನ ಹರಸಿದ ಆತ್ಮೀಯ ಹೃದಯಗಳಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಪುನೀತ್ ನಿಧನದ ನೋವಿನಲ್ಲಿರುವ ಕಾರಣ ನಟ ಜಗ್ಗೇಶ್ ಅವರು ಇಂದು ಯಾವುದೇ ಸಂಭ್ರಮವಿಲ್ಲದೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಸದ್ಯ ಜಗ್ಗೇಶ್, ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಪುನೀತ್ ಅವರ ಸಿನಿಮಾದ ಮೂಲಕ ಈ ಸಂಸ್ಥೆ ಹುಟ್ಟಿಕೊಂಡಿದ್ದು ಎನ್ನುವುದು ವಿಶೇಷ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

Comments

Leave a Reply

Your email address will not be published. Required fields are marked *