ಅಕ್ರಮ ಮರಳು ದಂಧೆ- ಕಾರು, ಬೈಕ್‍ಗಳಲ್ಲಿ ಹಿಂಬಾಲಿಸಿ ಅಧಿಕಾರಿಗಳ ಮೇಲೆ ದಾಳಿಗೆ ಯತ್ನ

– ರಾಯಚೂರಿನಲ್ಲಿ ಮತ್ತೋರ್ವನ ಬಂಧನ

ಚಿಕ್ಕಬಳ್ಳಾಪುರ/ರಾಯಚೂರು: ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ರಾಯಚೂರಿನಲ್ಲಿ ಗ್ರಾಮಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಲಾಯ್ತು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರದಲ್ಲಿ ರಾತ್ರೋರಾತ್ರಿ ಜಲ್ಲಿ ಕಲ್ಲು, ಗ್ರಾನೈಟ್ ದಿಮ್ಮಿಗಳು, ಕಲ್ಲಿನ ಬೋಲ್ಡರ್ಸ್‍ಗಳ ಅಕ್ರಮ ಸಾಗಾಟ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾನ್ ಜಿ ನಾಯಕ್ ಹಾಗೂ ಸಂದೀಪ್ ದಾಳಿ ನಡೆಸಿದ್ರು. ಅಲ್ಲದೇ ಯಲಗಲಹಳ್ಳಿ, ಚಿಕ್ಕನಾಗವಲ್ಲಿ ಗ್ರಾಮದ ಸುತ್ತಮುತ್ತ ಕಲ್ಲುಕ್ವಾರಿಗಳಲ್ಲಿನ 8 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡ್ರು.

ಇದೇ ಸಿಟ್ಟಿಗೆ ದಂಧೆಕೋರರು ಅಧಿಕಾರಿಗಳ ಮೇಲೆ ಸಿನಿಮೀಯ ರೀತಿಯಲ್ಲಿ ಕಾರು, ಬೈಕ್‍ ಗಳಲ್ಲಿ ಹಿಂಬಾಲಿಸಿ ದಾಳಿ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಆದ್ರೆ ಧೃತಿಗೆಡದ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಜೊತೆಗೆ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‍ ಗೆ ಮನವಿ ಮಾಡಿದ್ದಾರೆ.

ಮತ್ತೋರ್ವನ ಬಂಧನ:
ಇತ್ತ ರಾಯಚೂರಿನಲ್ಲಿ ಮರಳು ಲಾರಿ ಅಧಿಕಾರಿ ಮೇಲೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಪೊಲೀಸರು ಮತ್ತೊರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅವಧಿ ಮೀರಿದ ರಾಯಲ್ಟಿ ನೀಡಿದ್ದ ಪ್ರದೀಪ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಚೀಕಲಪರ್ವಿ ಮರಳು ಸಂಗ್ರಹ ಕೇಂದ್ರ ಸಿಬ್ಬಂದಿಯಾಗಿದ್ದು, ಮರಳು ಸಾಗಣೆಗೆ ಹಿಂದಿನ ಸಮಯದ ರಾಯಲ್ಟಿ ನೀಡಿದ್ದನು.

ಸಂಜೆ ವೇಳೆ ಮರಳು ಸಾಗಿಸುವಾಗ ಅಧಿಕಾರಿ ಮೇಲೆ ಲಾರಿ ಹರಿದಿದ್ದರಿಂದ ಚೀಕಲಪರ್ವಿ ವಿಎ ಸಾಹೇಬ್ ಪಟೇಲ್ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಲಾರಿ ಚಾಲಕ ರಂಗಪ್ಪನನ್ನ ಭಾನುವಾರ ಬಂಧಿಸಲಾಗಿತ್ತು. ರಾಯಲ್ಟಿ ಪಡೆದ ಸಮಯ ವ್ಯತ್ಯಾಸ ಹಿನ್ನೆಲೆಯಲ್ಲಿ ಚಾಲಕ ವೇಗವಾಗಿ ಲಾರಿ ಚಲಾಯಿಸಿರುವುದಾಗಿ ಚಾಲಕ ತಪ್ಪೊಪ್ಪಿಕೊಂಡಿದ್ದು, ಮಾನ್ವಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *