ಕರಾವಳಿಯಲ್ಲಿರುವ ನದಿಗಳ ಮರಳನ್ನು ಮಾರುವಂತಿಲ್ಲ: ಎನ್‌ಜಿಟಿ

ಚೆನ್ನೈ: ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಗೆ ಬರುವ ನದಿಗಳಲ್ಲಿ ತೆಗೆದ ಮರಳನ್ನು ಮಾರುವಂತಿಲ್ಲ. ಬದಲಿಗೆ ಕೆಳಮಟ್ಟದ ನದಿ ತಟಗಳನ್ನು ಸಮತೋಲನ ಮಾಡಲು, ತೀರ ಪ್ರದೇಶದಲ್ಲಿ ಮರಳು ಪೋಷಣೆಗೆ, ನದಿ ತಡೆಗೋಡೆಗಳ ಬಲವರ್ಧನೆಗೆ ಅಷ್ಟೇ ಈ ಮರಳನ್ನು ಬಳಸಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ಮಹತ್ವದ ಆದೇಶ ನೀಡಿದೆ.

court order law

ಈ ಆದೇಶ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನ್ವಯ ಆಗಲಿದೆ. 2017ರಲ್ಲಿ ಬ್ರಹ್ಮಾವರದ ಉದಯ್ ಸುವರ್ಣ ಮತ್ತು ಉಡುಪಿಯ ದಿನೇಶ್ ಕುಂದರ್ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎನ್‍ಜಿಟಿ, ಶುಲ್ಕ ಸಂಗ್ರಹಿಸಿ ನದಿಯಲ್ಲಿ ಮರಳುಗಾರಿಕೆ ಮಾಡುವ ಪದ್ದತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

ಮರಳು ತೆಗೆಯುವುದಕ್ಕೆ ಅನುಮತಿ ಪಡೆದಿರುವವರು ಮತ್ತು ಅವರ ಕುಟುಂಬದವರಷ್ಟೇ ಸಾಂಪ್ರದಾಯಿಕ ಪದ್ದತಿಯಲ್ಲಿ ದೋಣಿಗಳನ್ನು ಮೂಲಕ ಮರಳು ತೆಗೆಯಬೇಕು. ಮರಳುಗಾರಿಕೆಗೆ ಉಪ ಗುತ್ತಿಗೆ ನೀಡಬಾರದು. ಹೊರಗಿನ ಕಾರ್ಮಿಕರನ್ನು ಬಳಸಬಾರದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *