ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ : ಹುಟ್ಟೂರಲ್ಲಿ ಹಲವು ಕಾರ್ಯಕ್ರಮಗಳು

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ತನ್ನ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ಇಂದಿಗೆ ಒಂದು ವರ್ಷ. ಮೊನ್ನೆಯಷ್ಟೇ ಅವರ ಕುಟುಂಬವು ಪಂಚನಹಳ್ಳಿಯಲ್ಲಿರುವ ವಿಜಯ್ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿ, ಪೂಜೆ ಸಲ್ಲಿಸಿದ್ದರು. ಇವತ್ತು ಪುಣ್ಯತಿಥಿಯ ದಿನದಂದೂ ವಿಜಯ್ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ, ಅಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಗ್ಗೆ ವಿಜಯ್ ಅವರ ನೆಚ್ಚಿನ ರಂಗಸಂಸ್ಥೆ ಸಂಚಾರಿ ಬಳಗವು ವಿಜಯ್ ಅವರ ಗುರು ಮಂಗಳಾ ಅವರ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ಸಮಾಧಿ ಬಳಿ ರಂಗಗೀತೆ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿಜಯ್ ಇಷ್ಟದ ಹಾಡುಗಳನ್ನು ಹೇಳುವ ಮೂಲಕ ನಮನ ಸಲ್ಲಿಸಲಾಗುತ್ತಿದೆ. ಅಲ್ಲದೇ, ಅಭಿಮಾನಿಗಳು ಕೂಡ ಇಂದು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ : ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

ವಿಜಯ್ ಅವರು ಕಾಣಿಸಿಕೊಂಡ ಕೊನೆಯ ಆಲ್ಬಂ ಮೈಲಾರವನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಮೈಲಾರಲಿಂಗೇಶ್ವರ ಕುರಿತಾದ ಭಕ್ತಿ ಪ್ರಧಾನ ಗೀತೆ ಇದಾಗಿದ್ದು, ಈ ವಿಡಿಯೋ ಆಲ್ಬಂನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಇಂದು ಅದರ ಲೋಕಾರ್ಪಣೆ ಕೂಡ ಇದೆ. ಈ ಮೂಲಕ ವಿಜಯ್ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಗೆಳೆಯರು ಮತ್ತು ಆಪ್ತರು ಕೂಡ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *