ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಸ್ಯಾಮ್‍ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ.
ಸ್ಯಾಮ್‍ಸಂಗ್ 2018ರ ಡೆವೆಲಪರ್ ಕಾನ್ಫರೆನ್ಸ್ ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊದಲ್ಲಿ ಬುಧವಾರ ನಡೆಯಿತು. ಈ ವೇಳೆ ತನ್ನ ನೂತನ ಫ್ಲೆಕ್ಸಿ ಫೋಲ್ಡೆಬಲ್ ಸ್ಕ್ರೀನ್ ಹೊಂದಿರುವ ನೂತನ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಘೋಷಣೆ ಮಾಡಿದೆ. ಮಾಹಿತಿಗಳ ಪ್ರಕಾರ ಇದರ ಜೊತೆ ಸ್ಯಾಮ್‍ಸಂಗ್ ಇನ್ಫಿನಿಟಿ-ಯು, ಇನ್ಫಿನಿಟಿ-ವಿ ಹಾಗೂ ಇನ್ಫಿನಿಟಿ-ಓ ಮಾದರಿಯ ಗೆಲಾಕ್ಸಿ ಸ್ಮಾರ್ಟ್ ಫೋನ್‍ಗಳ ಬಿಡುಗಡೆಯ ಬಗ್ಗೆಯೂ ಸಹ ಘೋಷಣೆ ಮಾಡಿದೆ.
It’s a phone… It’s a tablet… It’s a phone that unfolds into a tablet! #SDC18 pic.twitter.com/FgwpJPjqTn
— Samsung Developer (@samsung_dev) November 7, 2018
ನೂತನ ಫೋಲ್ಡೆಬಲ್ ಸ್ಮಾರ್ಟ್ ಫೋನ್ 7.3 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಈ ಫೋನ್‍ಗಳಲ್ಲಿ ಎರಡು ಸ್ಕ್ರೀನ್‍ಗಳನ್ನು ಕಾಣಬಹುದು. ಮೊದಲನೇಯದು 1536 x 2152 ಸ್ಕ್ರೀನ್ ರೆಸಲ್ಯೂಶನ್, 420 ಪಿಪಿಐ ಹೊಂದಿದ್ದರೆ, ಎರಡನೇಯದ್ದು 4.58 ಇಂಚಿನ ಸ್ಕ್ರೀನ್ 840 x 1960 ರೆಸಲ್ಯೂಶನ್, 420 ಪಿಪಿಐ ಸ್ಕ್ರೀನ್ ಹೊಂದಿರಲಿದೆ.
ಗೂಗಲ್ ಜೊತೆಗೂಡಿ ಈ ಫೋನ್ ತಯಾರಾಗುತ್ತಿದ್ದು, ಫೋನಿನ ಇತರೆ ಯಾವುದೇ ಮಾಹಿತಿಗಳನ್ನು ಸ್ಯಾಮ್‍ಸಂಗ್ ಬಹಿರಂಗ ಪಡಿಸಿಲ್ಲ. ಮಾಹಿತಿಗಳ ಪ್ರಕಾರ 2019ರ ಪ್ರಾರಂಭದಲ್ಲಿ ಫೋಲ್ಡೆಬಲ್ ಫೋನ್ ಗ್ರಾಹಕರ ಕೈ ಸೇರಲಿದೆ ಎನ್ನಲಾಗುತ್ತಿದೆ. ಫೋನಿನ ಅಂದಾಜು ಬೆಲೆ 1,850 ಡಾಲರ್ (1.33 ಲಕ್ಷ ರೂ.) ಆಗಿರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply