`ನಾಯಿ, ಬೆಕ್ಕಿನ ಜೊತೆ ಒಂಟಿಯಾಗಿ ಸಾಯಿ’ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

ಸೌತ್ ಸಿನಿರಂಗದ ಬ್ಯೂಟಿ ಸಮಂತಾ ಸಿನಿಮಾ ವಿಚಾರದ ಜೊತೆ ವಯಕ್ತಿಕ ವಿಚಾರವಾಗಿಯೂ ಸುದ್ದಿಯಾಗುತ್ತಿರುವ ನಟಿ. ಈಗ `ನಾಯಿ, ಬೆಕ್ಕಿನ ಜೊತೆ ಒಂಟಿಯಾಗಿ ಸಾಯಿ’ ಎಂದವನಿಗೆ ಸಮಂತಾ ತಕ್ಕ ಉತ್ತರ ಕೊಟ್ಟಿದ್ದಾರೆ.

`ಪುಷ್ಪ’ ಸಕ್ಸಸ್ ನಂತರ ಚಿತ್ರರಂಗದ ಭರ್ಜರಿ ಬೇಡಿಕೆಯಲ್ಲಿರೋ ನಟಿ ಸಮಂತಾ ಅವರು ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರದಲ್ಲಿ ಮುದ್ದಿನ ನಾಯಿ ಮರಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಒಬ್ಬರು ಮಾತ್ರ  “ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ” ಎಂದು ಶಪಿಸಿ ಕಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಫಿಲ್ಮ್ ಚೇಂಬರ್ ಗೆ ಇಂದು ಚುನಾವಣೆ : ಮಧ್ಯಾಹ್ನ 2 ಗಂಟೆಗೆ ಮತದಾನ, ರಾತ್ರಿ ಫಲಿತಾಂಶ

 

View this post on Instagram

 

A post shared by Samantha (@samantharuthprabhuoffl)

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಶಾಪ ಹಾಕಿದ್ದನ್ನು ಗಮನಿಸಿದ ಸಮಂತಾ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನನ್ನು ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.  ಈ ರೀತಿ ಕಾಮೆಂಟ್ ಹಾಕಿದವನನ್ನು ಸಮಂತಾ ಫ್ಯಾನ್ಸ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ಆ ಕಾಮೆಂಟ್‌ ಮಾಡಿರುವ ವ್ಯಕ್ತಿ ಅವರ ಕಾಮೆಂಟ್ ಅನ್ನು ಡಿಲೀಟ್‌ ಮಾಡಿದ್ದಾರೆ. ಇನ್ನು ನಟಿಯ ಪಾಸಿಟಿವ್ ರಿಯಾಕ್ಷನ್ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಬಟ್ಟೆ ವಿಚಾರದಲ್ಲಿ, ವಿಚ್ಛೇದನ ವಿಚಾರದಲ್ಲಿ, `ಪುಷ್ಪ’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಸಖತ್ ಬೋಲ್ಡ್ ಆಗಿ, ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಕ್ಕೂ ಕೂಡ ಸಮಂತಾಗೆ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಒಂದಲ್ಲಾ ಒಂದು ವಿಚಾರವಾಗಿ ಸಮಂತಾ ನೆಗೆಟಿವ್ ಆಗಿ ಮಾತನಾಡುತ್ತಿದ್ದರು. ಆದರೆ ಸಮಂತಾ ಅದ್ಯಾವದನ್ನು ಲೆಕ್ಕಿಸದೆ ಬೋಲ್ಡ್ ಆಗಿ ಹೆಜ್ಜೆ ಇಡುತ್ತಾ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *