ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ವಿಚ್ಛೇದನ ಪಡೆದುಕೊಂಡು ಬೇರೆಯಾಗಿದ್ದಾರೆ. ಆದರೆ ಇವರು ಸಂಸಾರ ಬಿರುಕು ಬಿಡಲು ಕಾರಣವಾಗಿರುವ ಕೆಲವು ವಿಚಾರಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತಾಗಿ ಸಮಂತಾ ನಿನ್ನೆ ಸ್ಪಷ್ಟನೆ ನೀಡಿದ್ದರು. ಆದರೆ ಈ ವಿಚಾರವಾಗಿ ನಿರ್ದೇಶಕರ ಪುತ್ರಿಯೊಬ್ಬರು ಮಾತನಾಡಿದ್ದಾರೆ.

ಸಮಂತಾ ಅವರು ಶಕುಂತಲಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ನಿರ್ದೇಶನ ಮಾಡುತ್ತಿರುವುದು ಹಿರಿಯ ನಿರ್ದೇಶಕ ಗುಣಶೇಖರ್ ಅವರ ಪುತ್ರಿ ನೀಲಿಮಾ ಗುಣ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಮಂತಾ ಅವರನ್ನು ಅವರು ಹತ್ತಿರದಿಂದ ನೋಡಿದ್ದಾರೆ. ಇದನ್ನೂ ಓದಿ: ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

ನಮ್ಮ ತಂದೆ ಸ್ಕ್ರಿಪ್ಟ್ ವಿವರಿಸಿದಾಗ ಸಮಂತಾ ತುಂಬ ಖುಷಿ ಆಗಿದ್ದರು. ಆದರೆ ಜುಲೈ ಒಳಗೆ ಶೂಟಿಂಗ್ ಮುಗಿಸಬೇಕು ಅಂತ ಅವರು ಷರತ್ತು ಹಾಕಿದರು. ಆಗಸ್ಟ್ ವೇಳೆಗೆ ತಾವು ತಾಯಿ ಆಗುವ ಪ್ಲ್ಯಾನ್‍ನಲ್ಲಿ ಇರುವುದಾಗಿ ಸಮಂತಾ ತಿಳಿಸಿದ್ದರು. ಪೌರಾಣಿಕ ಸಿನಿಮಾಗಳ ಶೂಟಿಂಗ್‍ಗೆ ಹೆಚ್ಚು ಸಮಯ ಹಿಡಿಯುತ್ತದೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದರು. ಆದರೆ ನಾವು ಬೇಗ ಮುಗಿಸುವ ಭರವಸೆ ನೀಡಿದ್ದೆವು. ಮಗು ಪಡೆಯುವುದು ಅವರ ಪ್ರಮುಖ ಆದ್ಯತೆ ಆಗಿತ್ತು ಎಂದು ನೀಲಿಮಾ ಗುಣ ಹೇಳಿದ್ದಾರೆ. ಇದನ್ನೂ ಓದಿ:  ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದ್ರೆ, ಅದು ನಂಗೆ ಅಂದ್ರೆ ಜವಾಬ್ದಾರ ನಾನಲ್ಲ: ಸಿದ್ದಾರ್ಥ್

ಸಮಂತಾ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿವೆ. ಅವುಗಳಿಗೆಲ್ಲ ಅವರು ಟ್ವಿಟ್ಟರ್ ಮೂಲಕ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ನನಗೆ ಬೇರೆ ಸಂಬಂಧವಿದೆ, ನಾನು ಮಕ್ಕಳನ್ನು ಪಡೆಯಲು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಎನ್ನುವುದು ನೋವಿನ ಪ್ರಕ್ರಿಯೆ. ಇದು ಗುಣವಾಗಲು ಸಮಯ ನೀಡಿ ಎಂದು ಬರೆದುಕೊಂಡಿದ್ದರು.

ಆದರೆ ಈ ದಂಪತಿ ವಿಚ್ಛೇದನ ಪಡೆದುಕೊಂಡು ಹಲವು ದಿನಗಳಾಗಿದೆ. ವಿಚ್ಛೇದನ ಕುರಿತಾಗಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಜೋಡಿ ಕುರಿತಾಗಿ ಕೆಲವು ವಿಚಾರಗಳು ಇನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ.

Comments

Leave a Reply

Your email address will not be published. Required fields are marked *