‘ಯಶೋದ’ ಚಿತ್ರದ ಶೂಟಿಂಗ್ ಮುಗಿಸಿದ ಸಮಂತಾ : ಐದು ಭಾಷೆಗಳಿಗೆ ಡಬ್

ಖ್ಯಾತ ನಟಿ ಸಮಂತಾ ನಟನೆಯ “ಯಶೋದ” ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಶೂಟಿಂಗ್‌ ಮುಗಿಸಿ, ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಈ ಸಿನಿಮಾದಲ್ಲಿ ಸಮಂತಾ ರುತ್‌ಪ್ರಭು “ಯಶೋದ” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀದೇವಿ ಪ್ರೊಡಕ್ಷನ್‌ನ ೧೪ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶಿವಲೆಂಕಾ, ” ಸರಿಸುಮಾರು 100 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಒಂದೇ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬಜೆಟ್‌ ವಿಚಾರವಾಗಿ ಎಲ್ಲಿಯೂ ಕಾಂಪ್ರಮೈಸ್‌ ಆಗದೆ, ಕಥೆ ಬೇಡಿದಷ್ಟು ಹೂಡಿಕೆ ಮಾಡಿದ್ದೇವೆ. ಇತ್ತ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್‌ ಸಹ ಮುಗಿಸಿಕೊಳ್ಳುವ ಪ್ಲಾನ್‌ ಇದೆ. ಇದೆಲ್ಲದರ ಜತೆಗೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರ ಕೆಲಸಕ್ಕೂ ಚಾಲನೆ ನೀಡಲಿದ್ದೇವೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

“ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯ ಸಿನಿಮಾ ಇದಾಗಿದ್ದು, ಜಗತ್ತಿನಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಸಮಂತಾ ಅವರು ಚಿತ್ರದಲ್ಲಿ ಟೈಟಲ್‌ ರೋಲ್‌ ಪಾತ್ರ ನಿಭಾಯಿಸಿದ್ದಾರೆ. ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಈ ಚಿತ್ರದಲ್ಲಿವೆ. ಈ ನಮ್ಮ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್‌ ಮತ್ತು ಹಾಡನ್ನು ಬಿಡುಗಡೆ ಮಾಡಲಿದ್ದೇವೆ” ಎಂದಿದ್ದಾರೆ.

ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ ೧೨ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *