ಅತೀ ಹೆಚ್ಚು ಸಂಭಾವನೆ – ನಟಿಯರ ಪೈಕಿ ಸಮಂತಾ ಸ್ಥಾನ ಎಷ್ಟು?

ಕ್ಷಿಣ ಭಾರತದ ಕ್ವೀನ್ ಬೀ ಎಂದೇ ನಟಿ ಸಮಂತಾ ಫೇಮಸ್. ಟಾಲಿವುಡ್‍ನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಸದ್ಯ ಬಹು ಬೇಡಿಕೆಯ ನಟಿಯಾಗಿದ್ದಾರೆ. ಒಂದರ ನಂತರ ಒಂದರಂತೆ ಬ್ಯಾಕ್ ಟೂ ಬ್ಯಾಕ್ ಸಿನಿಮಾದಲ್ಲಿ ಫುಲ್ ಬ್ಯೂಸಿಯಾಗಿರುವ ಸಮಂತಾ ಈ ಮಧ್ಯೆ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 1 ನಟಿಯಾಗಿದ್ದರೆ, ಎರಡನೇ ಸ್ಥಾನದಲ್ಲಿ ಸಮಂತಾ ಇದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 12 ವರ್ಷ ಕಳೆದಿದ್ದು, ಇದೀಗ ಸಮಂತಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದನ್ನೂ ಓದಿ : Exclusive – ಬೆಂಗಳೂರು ಚಿತ್ರೋತ್ಸವ ಅವಾರ್ಡ್ 2021 : ಅತ್ಯುತ್ತಮ ಪಾಪ್ಯುಲರ್ ಚಿತ್ರ ಯುವರತ್ನ, ಅತ್ಯುತ್ತಮ ಕನ್ನಡ ಚಿತ್ರ ದೊಡ್ಡ ಹಟ್ಟಿ ಬೋರೇಗೌಡ

ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಊ ಅಂಟಾವಾ ಸಾಂಗ್‍ನಲ್ಲಿ ಸಮಂತಾ ಮಸ್ತ್ ಸ್ಟೆಪ್ಸ್ ಹಾಕಿದ್ದರು. ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುವುದರ ಜೊತೆಗೆ ಈ ಸಾಂಗ್ ಸಖತ್ ಹಿಟ್ ಪಡೆಯಿತು. ಜೊತೆಗೆ ಸಮಂತಾಗೆ ಜನಪ್ರಿಯತೆ ತಂದು ಕೊಟ್ಟಿತು. ಇದೀಗ ಈ ಸಿನಿಮಾದ ಬಳಿಕ ಸಮಂತಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಸಮಂತಾ ತಮ್ಮ ಸಿನಿಮಾಗಳಿಗೆ 3 ರಿಂದ 5 ಕೋಟಿ ರೂ. ಪ್ರೊಡಕ್ಷನ್ ಹೌಸ್ ಮತ್ತು ಇತರ ಹಲವು ಅಂಶಗಳಿಗೆ ಅನುಗುಣವಾಗಿ ಸಂಭಾವನೆಯನ್ನು ಪಡೆಯುತ್ತಿದ್ದರು. ಆದರೆ ಪುಷ್ಪ ಸಿನಿಮಾದಲ್ಲಿ ಕೇವಲ ಒಂದು ಸಾಂಗ್‍ಗೆ ಸಮಂತಾ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

ಒಟ್ಟಾರೆ ಕಳೆದೆರಡು ವರ್ಷಗಳಿಂದ ಸಮಂತಾ ಇಮೇಜ್ ಗಗನಕ್ಕೇರಿದ್ದು, ಕಮರ್ಷಿಯಲ್ ಸಿನಿಮಾದಿಂದ ಮಹಿಳಾ ಪ್ರಧಾನ ಸಿನಿಮಾಗಳವರೆಗೂ ಸಮಂತಾ ಅದ್ಭುತವಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

Comments

Leave a Reply

Your email address will not be published. Required fields are marked *