ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

ಮಂತಾ- ಅನುಷ್ಕಾ ಶರ್ಮಾ (Anushka Sharma) ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆಕ್ಟೀವ್ ಆಗಿರುವ ಸ್ಯಾಮ್- ಅನುಷ್ಕಾ ಇದೀಗ ವೆಬ್ ಸರಣಿಯೊಂದರಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಹೊಸ ಪ್ರಾಜೆಕ್ಟ್‌ಗೆ ಅನುಷ್ಕಾ ಶರ್ಮಾ ಜೊತೆ ಸಮಂತಾ ಕೈಜೋಡಿಸಲಿದ್ದಾರೆ. ಇದನ್ನೂ ಓದಿ:‘ಶಾಕುಂತಲಂ’ ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು

ಬ್ಯೂಟಿ ಕ್ವೀನ್ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ರೆ, ಸಮಂತಾ (Samanatha) ಸೌತ್‌ನಲ್ಲಿ ಬೇಡಿಕೆಯಿರುವ ನಟಿ. ಇವರಿಬ್ಬರೂ ಒಟ್ಟಾಗಿ ಕೆಲಸ ಮಾಡಿದ್ರೆ ಹೇಗಿರುತ್ತೆ ಅಲ್ವಾ? ಇದೀಗ ಅಂತಹದ್ದೇ ಭಿನ್ನ ಪ್ರಯತ್ನಕ್ಕೆ ಈ ಜೋಡಿ ರೆಡಿಯಾಗಿದ್ದಾರೆ. ಮಹಿಳಾ ಪ್ರಧಾನ (Women Centric) ವೆಬ್ ಸರಣಿಯಲ್ಲಿ ಅನುಷ್ಕಾಗೆ ಸಮಂತಾ ಸಾಥ್ ನೀಡಲಿದ್ದಾರೆ. ಈಗಾಗಲೇ ಅನುಷ್ಕಾ- ಸ್ಯಾಮ್ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದು, ವೆಬ್ ಸರಣಿ (Web Series)  ಬಗ್ಗೆ ಮಾತುಕತೆ ಆಗಿದೆ.

ಸಮಂತಾ ಕೂಡ ಕಥೆ ಇಷ್ಟವಾಗಿ ಟೀಂಗೆ ಓಕೆ ಎಂದಿದ್ದಾರೆ. ಅನುಷ್ಕಾ- ಸಮಂತಾ ಒಟ್ಟಾಗಿ ಕೆಲಸ ಮಾಡ್ತಿರುವ ಈ ವೆಬ್ ಸರಣಿಗೆ ಅನುಷ್ಕಾ ಸಹೋದರ ಕರ್ಣೇಶ್ ಶರ್ಮಾ (Karnesh Sharma) ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಪಾತಾಳ್ ಲೋಕ್, ಬುಲ್ ಬುಲ್, ಪರಿ ವೆಬ್ ಸರಣಿಯನ್ನ ಡೈರೆಕ್ಷನ್ ಮಾಡಿ ಕರ್ಣೇಶ್ ಸೈ ಎನಿಸಿಕೊಂಡಿದ್ದಾರೆ.

ಸಮಂತಾ ಅವರು ಈಗಾಗಲೇ ‘ದಿ ಫ್ಯಾಮಿಲಿ ಮೆನ್ 2’ ವೆಬ್ ಸರಣಿ ಮೂಲಕ ಮನಗೆದ್ದಿದ್ದಾರೆ. ಬಾಲಿವುಡ್‌ನ ‘ಸಿಟಾಡೆಲ್’ (Citadel) ವೆಬ್ ಸರಣಿಯಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ. ಸದ್ಯ ಅನುಷ್ಕಾ- ಸಮಂತಾ ಒಟ್ಟಾಗಿ ನಟಿಸೋ ಪ್ರಾಜೆಕ್ಟ್ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ. ಇಬ್ಬರ ಕಾಂಬಿನೇಷನ್‌ ವೆಬ್‌ ಸರಣಿ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.