ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‍ಪುರ್ ಸಿಜೆಎಂ ನ್ಯಾಯಾಲಯ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನು ವಿಧಿಸಿತ್ತು. ಈ ಸಂಬಂಧ ಎರಡು ದಿನಗಳ ಕಾಲ ಜೈಲಿನಲ್ಲಿದ್ದ ಸಲ್ಮಾನ್ ಗೆ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ನೀಡಿತ್ತು.

ಈ ಸಂಬಂಧ ಜೋಧ್‍ಪುರದಿಂದ ಸಂಜೆ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಲ್ಮಾನ್ ಮುಂಬೈನ ಗ್ಯಾಲೆಕ್ಸಿ ಅಪಾರ್ಟ್ ಮೆಂಟ್ ನತ್ತ ಮಾಜಿ ಗೆಳತಿ ಕತ್ರಿನಾ ಕೈಫ್, ಜೈ ಹೋ ಬೆಡಗಿ ಡೈಸಿ ಶಾ, ಜಾಕ್ವೇಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ರು.

ಸಲ್ಮಾನ್ ದೋಷಿ ಅಂತಾ ನ್ಯಾಯಾಲಯ ಆದೇಶಿಸುತ್ತಿದ್ದಂತೆ ಬಾಲಿವುಡ್‍ನ ಯಾವ ನಟಿಯರೂ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇತ್ತ ಸಲ್ಮಾನ್‍ಗೆ ಬೇಲ್ ಸಿಗುತ್ತಿದ್ದಂತೆ ಕತ್ರಿನಾ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಸಲ್ಮಾನ್ ಖಾನ್ ಬಾಲ್ಕನಿಗೆ ಬಂದು ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದ್ರು.

ಈ ಹಿಂದೆ ಪ್ರೀತಿಯಲ್ಲಿದ್ದ ಸಲ್ಲು ಮತ್ತು ಕ್ಯಾಟ್ ಮಧ್ಯೆ ಕೆಲ ಕಾರಣಗಳಿಂದಾಗಿ ಬ್ರೇಕಪ್ ಉಂಟಾಗಿತ್ತು. ಸಲ್ಮಾನ್ ಜೊತೆಗಿನ ಬ್ರೇಕಪ್ ಬಳಿಕ ಕತ್ರಿನಾ ಹೆಸರು ಚಾಕ್ಲೇಟ್ ಬಾಯ್ ರಣ್‍ಬೀರ್ ಕಪೂರ್ ಜೊತೆ ಬಲವಾಗಿ ಕೇಳಿ ಬಂದಿತ್ತು. 2017ರಲ್ಲಿ ತೆರೆಕಂಡ ‘ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಕತ್ರಿನಾ ಮತ್ತು ಸಲ್ಮಾನ್ ಜೊತೆಯಾಗಿ ನಟಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಮತ್ತೆ ಪ್ರೀತಿಯ ಅಲೆ ಹುಟ್ಟುಕೊಂಡಿದೆ ಅಂತಾ ಹೇಳಲಾಗುತ್ತಿದೆ.

https://www.instagram.com/p/BhSoy7NAf_S/?hl=en&taken-by=bollywood

https://www.instagram.com/p/BhRv245gniC/?hl=en&taken-by=bollywood

https://www.instagram.com/p/BhNs8gvAAB1/?hl=en&taken-by=bollywood

https://www.instagram.com/p/BhMXIIEHbEo/?hl=en&taken-by=bollywood

Comments

Leave a Reply

Your email address will not be published. Required fields are marked *