ಸಿನಿಮಾ ಸೋಲಿನ ಬೆನ್ನಲ್ಲೇ ಸಿಗರೇಟ್ ಸೇದುತ್ತಾ ಕುಳಿತ ಸಲ್ಮಾನ್ ಖಾನ್

ಲ್ಮಾನ್ ಖಾನ್ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾದ ಸೋಲಿನ ಬೆನ್ನಲ್ಲೇ ಶೂಟಿಂಗ್ ಸೆಟ್‌ನಲ್ಲಿ ಸಲ್ಮಾನ್ ಖಾನ್ (Salman Khan) ಸಿಗರೇಟ್ ಸೇದುತ್ತಾ ಕುಳಿತ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

ಸಲ್ಮಾನ್ ಖಾನ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರ ಏ.21ಕ್ಕೆ ತೆರೆಕಂಡಿತ್ತು. ಸಲ್ಮಾನ್ ಜೋಡಿಯಾಗಿ ಪೂಜಾ ಹೆಗ್ಡೆ (Pooja Hegde) ನಟಿಸಿದ್ದರು. ಅತಿಥಿ ಪಾತ್ರದಲ್ಲಿ ತೆಲುಗಿನ ಸ್ಟಾರ್ ರಾಮ್ ಚರಣ್, ವೆಂಕಟೇಶ್ ಕೂಡ ಕಾಣಿಸಿಕೊಂಡಿದ್ದರು. ಸಿನಿಮಾ ಗೆಲುವಿಗಾಗಿ ಭರ್ಜರಿ ಪ್ರಚಾರ ಕೂಡ ಮಾಡಿದ್ದರು. ಇದೀಗ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಬಿಗ್ ಬಿ: ಹಣ ಕಳೆದುಕೊಂಡ ಬಗ್ಗೆ ಅಮಿತಾಭ್ ಕಿಡಿಕಿಡಿ

ಈ ನಡುವೆ ಸಲ್ಮಾನ್ ಖಾನ್ (Salman Khan) ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೂಟಿಂಗ್ ಸೆಟ್ ನಲ್ಲಿ ಸಲ್ಮಾನ್ ಖಾನ್ ಹರಟೆ ಹೊಡೆಯುತ್ತಾ ಸಿಗರೇಟು ಸಿದುತ್ತಾ ಕುಳಿತಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತನ್ನ ಸಿನಿಮಾ ಸೋಲಿಗೆ ಸಲ್ಮಾನ್‌ ವಿಪರೀತವಾಗಿ ಸಿಗರೇಟ್‌ ಸೇದುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದ್‌ ಕಡೆ ವೈರಲ್ ಆಗಿರುವ ವೀಡಿಯೋ ಟೈಗರ್ -3 (Tiger 3) ಸಿನಿಮಾದ್ದು ಎನ್ನಲಾಗಿದೆ. ಮನೀಶ್ ಶರ್ಮಾ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ವೇಳೆ ಸಲ್ಮಾನ್ ಖಾನ್ ಸಿಗರೇಟು ಸೇದಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಸಲ್ಮಾನ್ ಖಾನ್ (Salman Khan) ಸಿಗರೇಟು ಬಿಟ್ಟಿದ್ದರು ಎನ್ನಲಾಗಿತ್ತು. ಆರೋಗ್ಯ ಸಮಸ್ಯೆಯಿಂದ ಧೂಮಪಾನ ತ್ಯಜಿಸಿದ್ದಾರೆ ಎನ್ನಲಾಗಿತ್ತು. ಸಲ್ಮಾನ್ ಖಾನ್ ಚೈನ್ ಸ್ಮೋಕರ್ ಆಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಸಿಗರೇಟಿನಿಂದ ದೂರ ಇದ್ದರು ಎನ್ನಲಾಗಿತ್ತು. ಆದರೀಗ ಶೂಟಿಂಗ್ ಸೆಟ್‌ನಲ್ಲಿ ಸಲ್ಮಾನ್ ಖಾನ್ ಕೈಯಲ್ಲಿ ಸಿಗರೇಟು ನೋಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.