‘ಸಿಖಂದರ್’ ಟೀಸರ್ ಔಟ್: ರಗಡ್ ಲುಕ್‌ನಲ್ಲಿ ಸಲ್ಮಾನ್ ಖಾನ್

ಬಾಲಿವುಡ್‌ನ ಬಹುನಿರೀಕ್ಷಿತ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಖಂದರ್’ (Sikandar) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್ (Salman Khan) ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ‘ಸಿಖಂದರ್’ ಆದ ಸಲ್ಮಾನ್ ಅವತಾರಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

‘ಸಿಖಂದರ್’ 1:41 ನಿಮಿಷದ ಟೀಸರ್ ಇದಾಗಿದ್ದು, ಬಹಳಷ್ಟು ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ ಎಂದು ಸಲ್ಮಾನ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ರಿಯಲ್ ಆಗಿಯೂ ಎದುರಾಳಿಗಳಿಗೆ ಈ ಡೈಲಾಗ್ ಠಕ್ಕರ್ ಕೊಡುವಂತಿದೆ. ಇನ್ನೂ ಟೀಸರ್‌ನಲ್ಲಿ ಸಖತ್ ಸ್ಟೈಲೀಶ್ ಮತ್ತು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ‘ಮಗಧೀರ’ ನಟಿ ಕಾಜಲ್ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನೂ ಸಾಲು ಸಾಲು ಸಿನಿಮಾ ಸೋಲುಗಳನ್ನು ಅನುಭವಿಸಿರುವ ಸಲ್ಮಾನ್ ಖಾನ್‌ಗೆ ಈ ಚಿತ್ರ ಸಕ್ಸಸ್ ಸಿಗುತ್ತಾ? ನಟರ ಪಾಲಿಗೆ ಲಕ್ಕಿ ಚಾರ್ಮ್ ಆಗಿರೋ ರಶ್ಮಿಕಾ ಫೇಮ್, ‘ಸಿಖಂದರ್’ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.