ಮಾಸ್‌ ಅವತಾರ ತಾಳಿದ ಸಲ್ಮಾನ್‌ ಖಾನ್‌- ‌’ಸಿಕಂದರ್‌’ ಟೀಸರ್‌ ಮೆಚ್ಚಿದ ಫ್ಯಾನ್ಸ್

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

ಎದುರಾಳಿಗಳಿಗೆ ಸದೆಬಡಿಯುವ ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಸಖತ್ ಡೈಲಾಗ್ ಕೂಡ ಹೊಡೆದಿದ್ದಾರೆ. ‘ಸಿಕಂದರ್’ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಖಡಕ್ ಲುಕ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ನೋಡುಗರಿಗೆ ಕಿಕ್ ಕೊಟ್ಟಿದೆ. ಸಲ್ಮಾನ್ ಪ್ರೇಯಸಿಯಾಗಿ ರಶ್ಮಿಕಾ ಮಿಂಚಿದ್ದಾರೆ.

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಸಲ್ಮಾನ್‌ಗೆ ಲಕ್ಕಿ ನಟಿ ರಶ್ಮಿಕಾ ಜೊತೆಯಾಗಿರೋದ್ರಿಂದ ಸಿನಿಮಾ ಸಕ್ಸಸ್ ಕಾಣುತ್ತಾ? ಎಂಬುದನ್ನು ಕಾದುನೋಡಬೇಕಿದೆ. ಈದ್ ಹಬ್ಬದಂದು ಸಿನಿಮಾ ಬಿಡುಗಡೆಯಾಗಲಿದೆ.

ಈ ವರ್ಷ ರಶ್ಮಿಕಾ ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ಗೆ ಉತ್ತಮ ಪ್ರಶಂಸೆ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅಭಿನಯದ ಜೊತೆ ಗಲ್ಲಾಪೆಟ್ಟಿಗೆ ಕೂಡ ಲೂಟಿ ಮಾಡಿದೆ. ಹಾಗಾಗಿ ಸಹಜವಾಗಿ ‘ಸಿಕಂದರ್’ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.